ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪುಸ್ತಕ | Swami Vivekananda Biography PDF In Kannada

‘ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪುಸ್ತಕ ‘ PDF Quick download link is given at the bottom of this article. You can see the PDF demo, size of the PDF, page numbers, and direct download Free PDF of ‘Swami Vivekananda Kannada Biography’ using the download button.

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪುಸ್ತಕ – Swami Vivekananda Biography PDF Free Download

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ

ವಿವೇಕಚೂಡಾಮಣಿಯಲ್ಲಿ ಒಂದು ಸ್ಫೂರ್ತಿಪ್ರದವಾದ ವಾಕ್ಯವಿದೆ: “ಮನುಷ್ಯನಾಗಿ ಹುಟ್ಟುವದು, ಮುಮುಕ್ಷುವಾಗುವದು, ಮಹಾಪುರುಷರನ್ನು ಆಶ್ರಯಿಸುವದು- ಈ ಮೂರೂ ಒಬ್ಬನಿಗೆ ದೊರಕುವದು ಬಲುಕಷ್ಟ; ಇವು ದೈವಾನುಗ್ರಹದಿಂದಲೇ ಸಿಕ್ಕತಕ್ಕವುಗಳಾಗಿವೆ.

” ಈ ವಾಕ್ಯದ ಅರ್ಥವು ಶ್ರೀ ವಿವೇಕಾನಂದಸ್ವಾಮಿಗಳವರ ಜಯಂತಿಯ ದಿನ (ಫೆಬ್ರವರಿ, 2) ಮನನಮಾಡಿ ಕೊಳ್ಳುವದಕ್ಕೆ ಯೋಗ್ಯವಾಗಿರುತ್ತದೆ. ಏಕೆಂದರೆ ಸ್ವಾಮಿಗಳಿಗೆ ನರಜನ್ಮವು ದೊರಕಿದ್ದಲ್ಲದೆ ನರೇಂದ್ರನಾಥನೆಂಬ ತಮ್ಮ ಪೂರ್ವಾಶ್ರಮದ ಹೆಸರು ಅನ್ವರ್ಥವಾಗುವಂಥ ವಿದ್ಯೆಯೂ ವಿವೇಕವೂ ದೊರಕಿದ್ದವು: ಯೌವನವು ತಲೆದೋರುವ ಹೊತ್ತಿಗೆ ಸರಿಯಾಗಿ ಪ್ರಬಲವಾದ ಮುಮುಕ್ಷುತ್ವವು ಒಡೆದು ಮೂಡಿತ್ತು; ಆ ಮುಮುಕ್ಷುತೆಯ ನೀರಡಿಕೆಯನ್ನು ಸಂಪೂರ್ಣವಾಗಿ ನೀಗಬಲ್ಲ ಮಹಾಪುರುಷರ ಬೋಧಾಮೃತವೂ ಹತ್ತಿರದಲ್ಲಿಯೇ ದೊರಕಿತ್ತು.

ನರೇಂದ್ರನಾಥನಿಗೆ ದೊರೆತ ವಿದ್ಯಾಭ್ಯಾಸದಿಂದ ದೇಶಭಕ್ತಿ, ತತ್ತ್ವವಿಚಾರದಲ್ಲಿ ಆಸಕ್ತಿ ಇವೆರಡೂ ದೊರೆತಿದ್ದರೂ ತರ್ಕಪ್ರಧಾನವಾದ ಆ ವಿದ್ಯೆಯಲ್ಲಿಯೇ ಅವನು ಮುಳುಗಿದ್ದರೆ ಅವನು ಎಂದಿಗೂ ವಿವೇಕಾನಂದನಾಗುತ್ತಿರಲಿಲ್ಲ.

ಉತ್ಕಟವಾದ ವೈರಾಗ್ಯವೂ ತೀವ್ರವಾದ ಮುಮುಕ್ಷುತ್ವವೂ ದೈವಾನುಗ್ರಹದಿಂದ ಅವನಲ್ಲಿ ನೆಲೆಗೊಂಡಿದ್ದರಿಂದ ಅವನು ಮದುವೆಯಾದದ್ದನ್ನು ನೋಡಬೇಕೆಂಬ ತಂದೆತಾಯಿಗಳ ಇಚ್ಛೆಯು ನೆರವೇರುವದು ತಪ್ಪಿಹೋಯಿತು.

ಅವನು ವಕೀಲನಾಗುವದೂ ಬಿಟ್ಟುಹೋಯಿತು. ತನ್ನೊಡನೆ ಸಕಲವಿದ್ಯಾನಿಲಯದಲ್ಲಿ ಓದಿದ್ದ ಮಿಕ್ಕ ವಿದ್ಯಾರ್ಥಿಗಳಂತೆ ಅವನು ಪಾಶ್ಚಾತ್ಯರ ಅನುಕರಣವೆಂಬ ಅಂಧಕೂಪದಲ್ಲಿ ಬೀಳಲಿಲ್ಲ, ಬರಿಯ ಸಂಶಯಗಳ ಸುಂಟರಗಾಳಿ ಯಲ್ಲಿಯೇ ಸಿಕ್ಕಿ ನರಳುತ್ತಲೂ ಕೂರಲಿಲ್ಲ.

ಅವನು ನಿಜವಾದ ಬ್ರಹ್ಮಜಿಜ್ಞಾಸುವಾಗಿ ಮೊದಲು ಬ್ರಹ್ಮಸಮಾಜವನ್ನು ಸೇರಿದನು: ಆಮೇಲೆ ಶಬ್ದಬಹವನ್ನು ಮೀರಿ ಪರಬ್ರಹ್ಮವನ್ನೇ ತೋರಿಸಿಕೊಡಬಲ್ಲ ಸದ್ಗುರುವನ್ನೂ ಕಂಡುಕೊಂಡನು.

ಮಹಾಮರುಷರಲ್ಲಿ ಅಗ್ರಗಣ್ಯರೆಂದನಿಸಿಕೊಂಡಿದ್ದ ಶ್ರೀರಾಮಕೃಷ್ಣ ಪರಮಹಂಸರವರಿಂದ ನರೇಂದ್ರನಿಗೆ ಆದ ಮಹೋಪಕಾರವನ್ನು ಕೆಲವರು ಅಲ್ಪವಾಗಿ ಎಣಿಸಬಹುದು, ಆದರೆ ನಿಜವಾಗಿ ಅದು ಅಪಾರವಾಗಿರುತ್ತದೆ. ಮೊದಲು ಅವರು ಅವನನ್ನು ತಮ್ಮಲ್ಲಿಗೆ ಮತ್ತೆಮತ್ತೆ ಬರುವಂತೆ ಆಕರ್ಷಣೆ ಮಾಡಿಕೊಂಡರು: ಆಮೇಲೆ ಅವನ ತಲೆಯಲ್ಲಿ ಮೊಳೆಯುತ್ತಿದ್ದ ಸಂಶಯ ಪರಂಪರೆಯ ಹುಟ್ಟನ್ನಡಗಿಸಿದರು.

ಬಳಿಕ ಸಾಕಾರಸಗುಣಪರಮೇಶ್ವರನಲ್ಲಿ ಶ್ರದ್ಧೆಯನ್ನೂ ಭಕ್ತಿಯನ್ನು ತಂದುಕೊಟ್ಟರು: ಕಾಲಕ್ರಮದಲ್ಲಿ ಅವನನ್ನು ನಿರ್ಗುಣನಿರಾಕಾರ ಸಚ್ಚಿದಾನಂದಸಾಗರದಲ್ಲಿ ಮುಳುಗಿಸಿ ನಿರ್ವಿಕಲ್ಪ ಸಮಾಧಿಯ ಸೌಖ್ಯವನ್ನು ಸೂರೆಗೊಟ್ಟರು: ಇಷ್ಟಾದರೂ ತೃಪ್ತರಾಗದೆ ಲೋಕದಲ್ಲಿ ಸಾವಿರಾರು ಜನಗಳಿಗೆ ಪರಮಾಚಾರ್ಯನಾಗುವದೇ ನಿನ್ನ ಜೀವನದ ಪರಮೋದ್ದೇಶವೆಂಬ ಸಚನೆಯನ್ನ ಅವನ ಮುಂದಿಟ್ಟು ಕೊನೆಗೆ ತಮ್ಮ ಆಧ್ಯಾತ್ಮಿಕ ಸಂಪತ್ತೆಲ್ಲವನ್ನೂ ಅವನಿಗೆ ಬಿಟ್ಟುಕೊಟ್ಟುಬಿಟ್ಟರು!

ಸಕ್ಷೇತ್ರದಲ್ಲಿ ಬಿತ್ತಿದ ಬೀಜವು ಹುಲುಸಾದ ಬೆಳೆಯನ್ನು ಕೊಡುವಂತೆ ಪರಮಹಂಸರ ಶಕ್ತಿಪಾತದಿಂದ ಗ್ರಂಥಿಭೇದವನ್ನು ಪಡೆದ ನರೇಂದ್ರನು ಅಕ್ಷರಶಃ ವಿವೇಕಾನಂದರಾದರು. ಆಲದ ಬೀಜವು ನೋಡುವದಕ್ಕೆ ಅಷ್ಟು ಸಣ್ಣದಾಗಿದ್ದರೂ ನೂರಾರು ಜನರಿಗೆ ಆಸರಕೊಡುವ ಮಹಾವಟವೃಕ್ಷವಾಗಿ ಬೆಳೆಯುವ ಶಕ್ತಿಯು ಅದರಲ್ಲಿ ಅವ್ಯಕ್ತವಾಗಿರುವದಲ್ಲವೆ? ಶ್ರೀವಿವೇಕಾನಂದಸ್ವಾಮಿಗಳು ಕ್ರಮಕ್ರಮವಾಗಿ ಅಂತ ಮಹಾವಟವೃಕ್ಷವಾಗಿ ಬೆಳೆದರು.

ಪರಮಹಂಸ ಪರಿವ್ರಾಜಕರಾಗಿ ಕಾಲುನಡಣೆಯಿಂದ ಇಡಿಯ ಭರತಖಂಡದ ಯಾತ್ರೆಯನ್ನು ಮಾಡಿ ಸಾಧುಸಜ್ಜನರ ಸಂದರ್ಶನದಿಂದಲೂ ತಮ್ಮ ಪ್ರತಿಭೆಯಿಂದಲೂ ಈ ಖಂಡದಲ್ಲಿ ಗುಪ್ತವಾಗಿದ್ದ ಅಧ್ಯಾತ್ಮ ಶಕ್ತಿಯನ್ನು ಸಾಕ್ಷಾತ್ಕಾರಮಾಡಿಕೊಂಡರು.

ಆ ಶಕ್ತಿಯು ಈ ದೇಶದಲ್ಲಿ ವಿಕಾಸವಾಗಬೇಕಾದರೆ ಕಡಲಿನಾಚೆಗೂ ಅಡಿಯಿಡುವದು ಅತ್ಯವಶ್ಯವೆಂಬುದನ್ನು ಕಂಡುಕೊಂಡರು.

ಸಿಂಹಗರ್ಜನೆಯಂಥ ತಮ್ಮ ವೀರವಾಣಿಯಿಂದ ಅಮೆರಿಕದ ವಿಶ್ವಧರ್ಮಸಮ್ಮೇಳನದಲ್ಲಿ ಆಧುನಿಕ ನಾಗರಿಕತೆಗೆ ಅರ್ಥವಾಗುವಂಥ ವಾಕ್ಸರಣಿಯಲ್ಲಿ ಚಿರಂತನವಾಗಿರುವ ವೇದಾಂತದರ್ಥವನ್ನು ಸಾರಿದರು. ಎಲ್ಲೆಲ್ಲಿಯೂ ಆ ವೀರನಾದವು ಮೊಳಗಿತು, ಮತ್ತೆ ಭರತಖಂಡದ ಗುಹೆಗಳಲ್ಲೂ ಮಾರುದಾಕೊಟ್ಟರು. ಈ ದೇಶದ ಜನಗಳೆಲ್ಲ ಪಾಶ್ಚಾತ್ಯ ಮಂತ್ರ ಶಕ್ತಿಯಿಂದ ಬಿಗಿದುಕೊಂಡಿದ್ದ ಕಟ್ಟನ್ನು ಕೊಡವಿಕೊಂಡು ಕಂದೆರೆದದ್ದು ತಮ್ಮ ಅನಾದಿಸಂಸ್ಕೃತಿಯ ಸ್ವರೂಪವನ್ನು ಕಂಡುಕೊಂಡರು.

ಶ್ರೀ ರಾಮಕೃಷ್ಣ ಪರಮಹಂಸರಲ್ಲಿ ಸಂನ್ಯಾಸ ಸ್ವೀಕಾರವನ್ನು ಮಾಡಿದ್ದ ಹತ್ತು ಹನ್ನೆರಡು ಜನ ಸಂನ್ಯಾಸಿಗಳ ಗುಂಪು ಶ್ರೀ ವಿವೇಕಾನಂದಸ್ವಾಮಿಗಳ ನಾಯಕತ್ವದ ಫಲವಾಗಿ ಈಗ ನೂರಾರು ಜನ ಸಂನ್ಯಾಸಿಗಳ ತಂಡವಾಗಿದೆ: ಭರತ ಖಂಡದಲ್ಲಿಯೂ ವಿದೇಶಗಳಲ್ಲಿಯೂ ಕೇಂದ್ರಗಳನ್ನು ಸ್ಥಾಪಿಸಿ ಶ್ರೀ ರಾಮಕೃಷ್ಣ ಮಹಾಸಂಘವೆನಿಸಿಕೊಂಡಿದೆ: ಈ ವರ್ಷ (1937) ಆ ಪರಮಹಂಸರ ಶತಮಾನೋತ್ಸವವನ್ನು ಲಕ್ಷಗಟ್ಟಲೆಯ ಜನರು ಆಚರಿಸುವಂತೆ ಉತ್ತೇಜನವನ್ನು ಕೊಟ್ಟಿರುತ್ತಾರೆ.

ಈ ಕೋಲಾಹಲದಲ್ಲಿ ಭರತಖಂಡದವರಾದ ನಾವು ಸ್ವಾಮಿಗಳ ದಿವ್ಯ ಸಂದೇಶವನ್ನು ಮರೆಯಬಾರದು. ಭರತಖಂಡದ ಸಿರಿಸಂಪತ್ತೆಲ್ಲವೂ ಆಧ್ಯಾತ್ಮಿಕ ಸಂಸ್ಕೃತಿಯೆಂದೂ ಅದರ ಮೂಲಕವಾಗಿಯೇ ನಮ್ಮ ಸಕಲ ಇಹಪರ | ಪುರುಷಾರ್ಥಗಳೂ ಈಡೇರಬೇಕಾಗಿದೆಯೆಂದೂ ಅವರು ಏರುದನಿಯಿಂದ ಮತ್ತೆಮತ್ತೆ ಸಾರಿರುತ್ತಾರೆ.

ಇಂದಿನ ನಾಗರಿಕತೆಯಲ್ಲಿ ನಮ್ಮಗಳಿಗೆ ಒಂದು ವಿಶಿಷ್ಟಸ್ಥಾನವು ಬರಬೇಕಾದರೆ, ಮತ್ತೊಬ್ಬರನ್ನ ನುಕರಣಮಾಡುವ ಕೆಟ್ಟಚಾಳಿಯನ್ನು ಬಿಡಬೇಕೆಂದೂ ನಮ್ಮ ಏಳಿಗೆಗೆ ಮತ್ತೊಬ್ಬರಲ್ಲಿ ಭಿಕ್ಷೆಬೇಡುವ ಕೆಟ್ಟಪದ್ಧತಿಯನ್ನು ಅತ್ತಿಟ್ಟು ನಮ್ಮ ನೈಜಸಂಪತ್ತಾದ ಅಧ್ಯಾತ್ಮ ವಿದ್ಯೆಯನ್ನು ಬೆಳೆಯಿಸಿಕೊಂಡು ಲೋಕಕ್ಕೆಲ್ಲ ದಾನಮಾಡಬೇಕೆಂದೂ ಇದರಿಂದಲೇ ಲೋಕಕಲ್ಯಾಣವೂ ನಮ್ಮ ಉದ್ಧಾರವೂ ನೆರವೇರುವವೆಂದೂ ಶಪಥಮಾಡಿ ಹೇಳಿರುತ್ತಾರೆ. ಆ ಉತ್ತಮ ಸಂದೇಶಕ್ಕೆ ಕಿವಿಗೊಡುವಂತೆ ನಮಗೆ ಪರಮಾತ್ಮನು ಅನುಗ್ರಹಮಾಡಲಿ! (ಅಧ್ಯಾತ್ಮ ಪ್ರಕಾಶ’ ಪತ್ರಿಕೆಯ ಸಂಪುಟ 8, ಫೆಬ್ರವರಿ 1937 ರಲ್ಲಿ ಪ್ರಕಟಿತ)

ಶ್ರೀ ಸ್ವಾಮಿ ವಿವೇಕಾನಂದರ ಸಾಧನ ಶಿಬಿರಗಳು

“ಸ್ವಾಮಿ ವಿವೇಕಾನಂದರು ಅನೇಕ ಮಹತ್ ಸಾಧನೆಗಳನ್ನು ಸಾಧಿಸಿ ಹೋಗಿದ್ದಾರೆ. ಅದರಲ್ಲಿ ಪ್ರಥಮ ಸ್ಥಾನವನ್ನು ಗಳಿಸಲು ಅರ್ಹವಾದುದು ಎಂದರೆ, ಶ್ರೀರಾಮಕೃಷ್ಣರಿಂದ ಅನುಷ್ಠಿತವೂ ಪ್ರಣೀತವೂ ಆಗಿರುವ ಸರ್ವಧರ್ಮ ಸಮನ್ವಯ ದೃಷ್ಟಿಯನ್ನು ಪ್ರಸಾರಮಾಡಿ, ಪೂರ್ವ ಪಶ್ಚಿಮ ದೇಶಗಳ ನಡುವೆ ಭವ್ಯವಾದ ಭಾವಸೇತುವನ್ನು ಬೀಸಿ ವಿಶ್ವಮೈತ್ರಿಗೆ ಮತ್ತು ವಿಶ್ವಪ್ರಜ್ಞೆಗೆ ಅಂಕುರಾರ್ಪಣ ಮಾಡಿ ಲೋಕಹೃದಯವನ್ನು ಸಂಕಾಚಿತಬುದ್ಧಿಯಿಂದ

ಎರಡನೆಯದಾಗಿ ಭಾರತೀಯ ಪ್ರಾಚೀನ ಸಂಪ್ರದಾಯ ಸಾರವತ್ತಾದ ಮತ್ತು ಶಾಶ್ವತವಾದ ಅಂಶಗಳೊಂದನ್ನೂ ಬಿಡದ ಹೊಸ ಲೋಕದ, ಹೊಸದೃಷ್ಟಿಗೆ ಹೊಂದಿಕೊಳ್ಳುವ ನವಸಂನ್ಯಾಸ ಸಂಪ್ರದಾಯ ಒಂದನ್ನು ಸ್ಥಾಪಿಸಿ ಅದರ ಶಾಖೋಪಶಾಖೆಗಳು ಪ್ರಪಂಚದ ಮೇಲೆಲ್ಲ ಹಬ್ಬುವಂತೆ ಮಾಡಿದುದು,’

“ಮೂರನೆಯದಾಗಿ ನರನಲ್ಲಿ ನಾರಾಯಣನನ್ನು ದರ್ಶಿಸುವ ಸಾಧನೆಯ ಮಾರ್ಗ ಒಂದನ್ನು ಬೋಧಿಸಿ, ಜಗತ್ತಿನ ಹಿತವನ್ನೂ ಅಕ್ಕದ ಮೋಕ್ಷವನ್ನೂ ಎಕಲಕ್ಷವನ್ನಾಗಿಸುವ ದರಿದ್ರನಾರಾಯಣ ಸೇವಾರೂಪದ ಧರ್ಮಸಾಧನೆಯನ್ನು ಲೋಕಕ್ಕೆ ಕಲಿಸಿದುದು.”

“ಸ್ವಾಮಿ ವಿವೇಕಾನಂದರ ರ್ಪಪೂರ್ಣವಾದ ಶಕ್ತಿವಾಣಿಯಲ್ಲಿ ಅನ್ನೋದ್ಧಾರಕವಾದ ವಿಭೂತಿ ಸ್ವಯಂ ಕ್ರಿಯಾಶೀಲವಾಗಿದೆ. ಅಲ್ಲಿ ಪತನ ಸಮಯದಲ್ಲಿ ನಮ್ಮನ್ನು ಕೈಹಿಡಿದೆತ್ತುವ ಔಧಾರವಿದೆ, ಹೃದಯ ದೌರ್ಬಲ್ಯದ ಸಮಯದಲ್ಲಿ ನಮ್ಮ ಕೈವನ್ನು ಕಿತ್ತೊಗೆದು ಕೆಚ್ಚನ್ನು ನೆಡುವ ಸಿಡಿಲಾಯಿದ, ಬುದ್ಧಿಗೆ ಪುಷ್ಟಿಯಿದೆ, ಹೃದಯಕ್ಕೆ ತೃಪ್ತಿಯಿದೆ. ನಮ್ಮ ವ್ಯಕ್ತಿತ್ವ ಸಮಸ್ತವನ ಸರ್ವದಯುವ ಸಂಪೂರ್ಣವಾಗಿ ವಿಕಾಸಗೊಳಿಸಿ ಪೂರ್ಣತೆಯ ಕಡೆಗೆ ನಮ್ಮನ್ನು ಕೊಂಡೊಯ್ಯುವ ಪೂರ್ಣದೃಷ್ಟಿಯೂ ಇಲ್ಲಿ ಸಿದ್ಧಿಸುತ್ತದೆ. ಇದು ಅಮೃತದ ಮಡು, ಮಿಂದರೆ ಪುನೀತರಾಗುತ್ತೇವೆ. ಇದೊಂದು ಜ್ಯೋತಿಯ ಖ: ಹೊಕ್ಕರೆ ಪ್ರಬುದ್ಧರಾಗುತ್ತೇವೆ…

ಮಹಾನ್‌ ಚೇತನರು

ಪೀಠಿಕೆ : ಜಗತ್ಕಾರಣನೂ, ಜಗಕಾರಕನೂ ಆದ ಭಗವಂತನು ಜಗದೋದ್ಧಾರನು, ದುರಿತ ನಿವಾರಕನು, ಶಿಷ್ಟ ಪರಿಪಾಲಕನು, ಉದ್ದೇಶದಿಂದಲೇ, ಭರತಖಂಡದಲ್ಲಿ ದಶಾವತಾರ ಮಾಡಿದನು.

ಅವನ ಎಂಟನೆಯ ಅವತಾರವಾದ ಶ್ರೀಕೃಷ್ಣಪರಮಾತ್ಮನು ತನ್ನ ಅಮೋಘವಾದ ಗೀತಾ ಸಂದೇಶದಲ್ಲಿ ಎರಡು ದಿವ್ಯ ಆಶ್ವಾಸನೆಗಳನ್ನು ಅನುಗ್ರಹಿಸಿದ್ದಾನೆ:

ಯದಾಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |

ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ | (47)

ಅಭ್ಯುದಯಕ್ಕೂ ನಿಶ್ರೇಯಸಕ್ಕೂ ಸಾಧನವಾಗಿರುವ ವರ್ಣಧರ್ಮ, ಆಶ್ರಮ ಧರ್ಮ, ಮುಂತಾದ ರೂಪದಲ್ಲಿರುವ ಧರ್ಮದ ನಾಶವಾದಾಗಲೆಲ್ಲ, ಅಧರ್ಮ ಮೇಲೇರಿಬರುವಾಗಲೆಲ್ಲ ನನ್ನ ಮಾಯೆಯಿಂದ ನನ್ನನ್ನು ಸೃಷ್ಟಿಸಿಕೊಳ್ಳುವನು.

ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಮ್ || ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ॥ (48)

ಸಾಧುಗಳನ್ನು, ಅಂದರೆ ಸನ್ಮಾರ್ಗದಲ್ಲಿರುವವರನ್ನು ಕಾಪಾಡುವದಕ್ಕಾಗಿಯೂ, ಪಾಪಕರ್ಮಗಳನ್ನು ಮಾಡುವವರನ್ನು ವಿನಾಶಗೊಳಿಸುವದಕ್ಕಾಗಿಯೂ, ಧರ್ಮವನ್ನು ಚೆನ್ನಾಗಿ ನೆಲೆನಿಲ್ಲಿಸುವದಕ್ಕಾಗಿ ಯುಗಯುಗದಲ್ಲಿಂಯ ಹುಟ್ಟಿತ್ತಿರುವೆನು –

ಈ ಭಾವಕ್ಕೆ ಪೂರಕವಾದಂತೆ, ಮತ್ತೊಂದು ವಿವರಣಾತ್ಮಕವಾದ, ಅಷ್ಟೇ ಧೈರ್ಯಪೂರಿತವಾಕನ್ನೂ ಭಗವಂತನು ಆಡಿದ್ದಾನೆ.

ಯದ್ಯದ್ವಿಭೂತಿಮತ್ತತ್ತಂ ಶ್ರೀಮದೂರ್ಜಿತಮೇವ ವಾ

ತತ್ತದೇವಾವಗಚ್ಛ ತ್ವಂ ಮಮ ತೇಜೋಂತ ಸಂಭವಮ್ ॥ (10-41)

ಲೋಕದಲ್ಲಿ, ಯಾವಯಾವ ಸತ್ಯವಸ್ತುವು, ಎಂದರೆ ವಿಭೂತಿಯಿಂದ

ಕೂಡಿರುವದೋ, ಲಕ್ಷ್ಮಿ ಯಿಂದ ಕೂಡಿರುವರೋ (ಸಂಪದ್ಭರಿತವಾಗಿದೆಯೋ) ಅಥವಾ ಉತ್ಸಾಹ, ಶಕ್ತಿಯಿಂದೊಡಗೂಡಿರುವದೋ, ಅವುಗಳೆಲ್ಲಾ ನನ್ನ ತೇಜಸ್ಸಿನ ಅಂಶಗಳು,

ಮಣ್ಯಭೂಮಿ, ಇಲ್ಲಿಯ ಹಿತವರಿಸರವಿರಬೇಕು. ಏಕೆಂದರೆ, ಜಗತ್ತಿನಲ್ಲಿ ಎಲ್ಲೆಡೆ ನಾನಾಬಗೆಯ ಸಸ್ಯಾವಳಿಗಳು ಇರಬಹುದು- ಮರುಭೂಮಿಯಲ್ಲಿ ಕುರುಚಲು hamಳು, ಚೌಗು ನೆಲದಲ್ಲೂ ಸಸ್ಯಗಳು, ಅಲ್ಲದೆ ಫಲಪುಷ್ಪಗಳೂ ಇವೆ.

ಆದರೆ ಸಾರವತ್ತಾದ ಭೂಮಿಯಲ್ಲಿ ನಾನಾ ಬಗೆಯ ಅಪೂರ್ವ ಲಕಾವೃಕ್ಷಗಳು ಸುಮಧುರ ಹಣ್ಣುಗಳು ಇವುಘಮಿಸುವ ಹೂವುಗಳು ತುಂಬಿ ಬೆಳೆದಿರುತ್ತವೆ. ಜಗತ್ತಿನಲ್ಲಿ ಭರತಭೂಮಿ, ಅಂತಹ ಸತ್ವಯುತವಾದ ಸಂಪದ್ಭರಿತ ನಂದನವನ, ಇದು ಋಷಿ ಮುನಿಗಳ ಬೀಡು, ಧರ್ಮನಿರತರು, ಧರ್ಮಭೀರುಗಳು, ಅಜ್ಜರಾದರೂ ಶುದ್ಧ ನಡೆಯಲ್ಲಿ ಆಸಕ್ತಿ ಇಟ್ಟು ಯತ್ನಿಸುವ ಸಾತ್ವಿಕದ ನಾಡು.

ಇಂತಹ ದಿವ್ಯನಂದನದಲ್ಲಿ ಶ್ರೀರಾಮಕೃಷ್ಣ ಪರಮಹಂಸರೆಂಬ ಕಲ್ಪವೃಕ್ಷದಲ್ಲಿ ಬಿಟ್ಟ ಅತಿ ಶ್ರೇಷ್ಠಫಲ ಶ್ರೀ ಸ್ವಾಮಿ ವಿವೇಕಾನಂದರು. ಆಧ್ಯಾತ್ಮಿಕ ಸಾಧನೆಯಲ್ಲಿ ಸನಾತನ ಧರ್ಮದ ಪ್ರತಿನಿಧಿಯಾಗಿ ಕಂಡರೆ, ಲೌಕಿಕರಂಗದಲ್ಲಿ ಕ್ಷಾತ್ರ ತೇಜದ ಪುರುಷ ಸಿಂಹರಾಗಿದ್ದಾರೆ, ಧಾರ್ಮಿಕ ರಂಗದಲ್ಲಿ ನವ ಸುಧಾರಣೆಯ ಹರಿಕಾರರಾಗಿದ್ದಾರೆ, ವ್ಯಕ್ತಿತ್ವದಲ್ಲಿ ಧೀರೋದಾತ್ತ ತೇಜಸ್ಸಿನ ಅಂಶವಾಗಿದ್ದಾರೆ. ಈ ದಿವ್ಯಚೇತನರು ಭರತಖಂಡದಲ್ಲಿ ಸಾಕಾರರೂಪದಲ್ಲಿ ಕಂಡು, ದೇಶದ ಉದ್ದಗಲಗಳಲ್ಲೂ, ಅಮೆರಿಕ ಇಂಗ್ಲೆಂಡಿನಂತಹ ಪಾಶ್ಚಿಮಾತ್ಯ ದೇಶಗಳಲ್ಲೂ ತಮ್ಮ ಪ್ರಭೆಯನ್ನು ಹರಿಸಿದ್ದಾರೆ. ಸ್ವಾಮಿ ವಿವೇಕಾನಂದರು ಹಿಂದೂಧರ್ಮವನ್ನು ಭಾರತ ದೇಶವನ್ನು ವಿನಾಶದಿಂದ ಉಳಿಸಿ, ರಕ್ಷಿಸಿದವರು.

ಅವರಿಲ್ಲದೆ ನಮ್ಮ ಧರ್ಮವನ್ನು ಕಳೆದುಕೊಳ್ಳುತ್ತಿದ್ದವು. ನಮ್ಮ ಸ್ವಾತಂತ್ರ್ಯವನ್ನು ಗಳಿಸಲಾಗುತ್ತಿರಲಿಲ್ಲ. ಆದುದರಿಂದ ನಮ್ಮ ಸರ್ವಸ್ವವೂ ಸ್ವಾಮಿ ವಿವೇಕಾನಂದರಿಗೆ ಸೇರಿದೆ.

ಅವರ ನಂಬಿಕೆ, ಅವರ ಸೈರ್ಯ ಮತ್ತು ಅವರ ಜ್ಞಾನ ಸದಾಕಾಲ ನಮ್ಮನ್ನು ಸ್ಫೂರ್ತಿಗೊಳಿಸಲಿ, ಅದರ ಮೂಲಕ ಅವರಿಂದ ನಾವು ಗಳಿಸಿರುವ ನಿಧಿಯನ್ನು ನಾವು ಜೋಪಾನವಾಗಿಡಲು ಸಹಕಾರಿಯಾಗಲಿ” ಎಂಬುದು ಶ್ರೀ ಸಿ. ರಾಜಗೋಪಾಲಚಾರಿಯವರ ರೋಮಾಂಚನಗೊಳಿಸುವ ಮಾತುಗಳು,

ವಂಶ, ಹಿರಿಮೆ : ಶ್ರೀ ವಿವೇಕಾನಂದರ ಜನ್ಮನಾಮ ನರೇಂದ್ರನಾಥ ದತ್ತ, ಕಲ್ಕತ್ತದ ದತ್ತವಂಶದ ಅವರೆಲ್ಲಾ ಕಾಯಸ್ತರು. ಅವರ ವಂಶಾವಳಿ, ಪ್ರಸಿದ್ಧ ವಕೀಲ ರಾಮಮೋಹನ ದತ್ತರಿಂದ, ಮಗ ದುರ್ಗಾಚರಣ ದತ್ತ, ತಾರುಣ್ಯದಲ್ಲೇ ಆಧ್ಯಾತ್ಮಿಕ ಬೆಳವಿನಿಂದ ಸಂನ್ಯಾಸಿಯಾದವರು- ಮೊಮ್ಮಗ ವಿಕ್ರಂದ ದಕ್ಷರವರೆಗೆ ಇವರ ಮಗನೇ ಮುಂದೆ ವಿವೇಕಾನಂದರೆಂಬ ಹೆಸರಿನಿಂದ ಜಗತ್ಪಸಿದ್ಧನಾದ ನರೇಂದ್ರನಾಥ ದತ್ತ, ಅವನ ತಾಯಿ ಭುವನೇಶ್ವರಿ, ವಿಶ್ವನಾಥ ದತ್ತರು ಬಹಳ ವಿಶಾಲಮನಸ್ಸಿನವರು, ಧಾರಾಳಿಗಳು, ಎಷ್ಟರ ಮಟ್ಟಿಗೆ ಎಂದರೆ ಇತರರಿಗಾಗಿ ಮಾಡಿದ ದಾನದಿಂದ, ಬಡತನಕ್ಕೆ ಬಂದಿಳಿದವರು, ಆದರೆ, ಅವರು ಸಂಗೀತ, ಲಲಿತ ಕಲೆಗಳಲ್ಲಿ, ಬೈಬಲ್, ಪರ್ಷಿಯನ್ ಕವಿ ಹಫೀಸ್ ಅವರ ಗೀತೆಗಳಲ್ಲಿ

ಅಸಕ್ತರಾದ ಬುದ್ಧಿಜೀವಿಗಳು. ಗಂಡುಮಕ್ಕಳಿಲ್ಲದ ಕಾರಣ ಕಾಶಿಯ ವಿಶ್ವೇಶ್ವರನ ಶ್ರದ್ಧಾಪೂರ್ವಕ ಬೇಡಿಕೆ, ಪರಕೆಯಿಂದ, ತಾಯಿ ಭುವನೇಶ್ವರಿಯು ಈ ಮಗನನ್ನು ಜನವರಿ 12, 13ರಲ್ಲಿ ಪಡೆದಳು.

Author
Language Kannada
No. of Pages276
PDF Size30 MB
CategoryBiography
Source/Creditskannadapdf.com

Related PDFs

मरणोत्तर जीवन Hindi PDF

मेरे गुरुदेव PDF In Hindi

The Autobiography of Benjamin Franklin PDF

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪುಸ್ತಕ – Swami Vivekananda Biography Kannada PDF Free Download

Leave a Comment

Your email address will not be published. Required fields are marked *

error: Content is protected !!