9ನೇ ತರಗತಿ ಕನ್ನಡ ಪುಸ್ತಕ | 9th Std Kannada Text Book PDF

‘9ನೇ ತರಗತಿ ಕನ್ನಡ ಪುಸ್ತಕ’ PDF Quick download link is given at the bottom of this article. You can see the PDF demo, size of the PDF, page numbers, and direct download Free PDF of ‘Kannada Text Book Class 9th’ using the download button.

9ನೇ ತರಗತಿ ಕನ್ನಡ ಪುಸ್ತಕ – 9th Std Kannada Text Book PDF Free Download

9ನೇ ತರಗತಿ ಕನ್ನಡ

ಜಯಪುರ ನನ್ನ ಪಾಲಿಗೆ ಹೊಸತಾಗಿರಲಿಲ್ಲ.

ಹದಿನೈದು ವರ್ಷಗಳ ಹಿಂದೊಮ್ಮೆ ಹೋಗಿದ್ದೆ. ಈ ಬಾರಿ ನಾನೂ ಶ್ರೀಪತಿಯೂ ರೈಲಿನಿಂದ ಇಳಿದಾಗ, ಬೆಳಗಿನ ಹನ್ನೊಂದು ಗಂಟೆಯ ಬಿಸಿಲು ಬಡಿಯುತ್ತಿತ್ತು, ಮಿತ್ತರಾದ ರೈಗಳು ನಿಲ್ದಾಣಕ್ಕೆ ಬಂದುನಮಗಾಗಿ ಕಾದಿದ್ದರು. ನಮ್ಮನ್ನು ಊರ ಹೊರಗಿನ ಅವರ ಮನೆಗೆ ಕರೆದುಕೊಂಡು ಹೋದರು.

ಹೊರಗಡೆ ನಾಲ್ಕು ಸುತ್ತಲೂ, ಉಸುಬು ಹರಡಿದ್ದ ಮರುಭೂಮಿಯಲ್ಲಿ ಅವರ ಮನೆಯಿತ್ತು.

ಅಲ್ಲಿ ಮಧ್ಯಾಹ್ನ ವೇಳೆ ಸ್ನಾನಕ್ಕೆ ನೀರು ಕಾಯಿಸುವ ಅಗತ್ಯವಿಲ್ಲ, ಉಸುಬಿನ ಕಾವಿನಿಂದ ನಲ್ಲಿಯ ನೀರು ಕದೇ ಬರುತ್ತಿತ್ತು.

ನಾನೇನೋ ಬಿಸಿನೀರು ಸ್ನಾನ ಮಾಡುವವ ಆದರೆ ನನಗೆ ಆದದ್ದು ಶ್ರೀಪತಿಗೆ ಆಗದು, ಶ್ರೀಪತಿ ತಣ್ಣೀರು ಮೀಯುತ್ತಿದ್ದ.

ಹೀಗಾಗಿ ಕಾದಿದ್ದ ನೀರನ್ನು ಆರಿಸಿ, ತಣ್ಣೀರಿನ ಸ್ನಾನ ಮಾಡಿದ. ಆನಂತರ ಊಟ ಮಾಡಿ ಒಂದೆರಡು ತಾಸು ವಿಶ್ರಾಂತಿ ಪಡೆದವು. ನಮ್ಮ ಮೊದಲ ಕಾರ್ಯಕ್ರಮವೆಂದರೆ, ಅಂದೇರಕ್ಕೆ ಹೋಗುವುದು.

ಊರ ಹೊರಗಿರುವ ನಮ್ಮ ಮಿತ್ತ ರೈಗಳಿಗೆ, ಅಂಬೇರಕ್ಕೂ ಜಯಪರಕ್ಕೂ ನಡುವೆ ಸಿಟಿ ಬಸ್‌ ನಡೆಯುತ್ತಿತ್ತೆಂದು ಸಹ ಗೊತ್ತಿರಲಿಲ್ಲ.

ಹೀಗಾಗಿ ನಾವು ಟಾಂಗಾವನ್ನು ಗೊತ್ತು ಮಾಡಿಕೊಂಡು, ನಗರದ ಮಧ್ಯಭಾಗದಿಂದ ಹಾದು ಹೋದವು.

ಜಯಪುರದ ಮುಖ್ಯ ಬೀದಿಗಳು ನನ್ನ ಮನಸ್ಸಿನ ಮೇಲೆ ತುಂಬಾ ಪರಿಣಾಮವನ್ನು ಬೀರಿದವು, ಒಂದು

ಶತಮಾನದ ಹಿಂದೆ ಆ ನಗರದ ಬೀದಿಗಳು ನಿರ್ಮಾಣವಾಗಿದ್ದರೂ ಬಹಳ ಅಗಲವಾದ ಬೀದಿಗಳವು; ನೇರವಾದವುಗಳು.

ಬಹುದೂರದಿಂದ ಕಾಣಿಸುವ ಅಂಗಡಿ-ಮನಗಳ ದೇಶೀ ವಾಸ್ತುರಚನೆ ಚೆನ್ನಾಗಿ ಶೋಭಿಸುತ್ತದೆ.

ಇಲ್ಲಿನ ಒಂದೊಂದು ಮನೆಯೂ ಒಂದೊಂದು ಶೈಲಿಯದೂ ಒಂದೊಂದು ದೇಶವೂ ಆಗಿ ಕಾಣಿಸುವುದಿಲ್ಲ.

ಆದುದರಿಂದಲೇ ನನಗೆ ಅವುಗಳ ಮೇಲೆ ಮೋಹ, ಇಲ್ಲಿನ ಮುಖ್ಯ ಬೀದಿಗಳು ಸಂಧಿಸುವಲ್ಲಿ ಸುಂದರವಾದ ಚೌಕಗಳಿವೆ, ಕೆಲವೊಂದು ಕಡೆಗಳಲ್ಲಿ ಭವ್ಯವಾದ ಮಹಾದ್ವಾರಗಳಿವೆ.

ಅಲ್ಲದೆ ಜಯಪುರ ಬಣ್ಣಗಾರರ ತವರೂರು, ಬಣ್ಣ ಹಾಕುವ ಕುಶಲಿಗರು ಆ ಊರಿನಲ್ಲಿ ಬಹಳ ಮಂದಿ ಇದ್ದಾರೆ.

ಬಣ್ಣದ ಮೋಹವಿರುವ ಜನರೂ ಬಹಳ ಇದ್ದಾರೆ, ಗಿಡಮರಗಳಿಲ್ಲದ ಸ್ಥಳದಲ್ಲಿ ವಾಸಿಸುವ ಜನರಿಗೆ,

ಕಣ್ಣಿನ ತಣಿವು ಹೇಗೆ ಬರಬೇಕು? ರಂಗುರಂಗಿನ ಲಂಗ, ಪಾಯಿಜುಮಾ, ಸೀರೆ, ರವಿಕೆ, ಮೇಲುದೆ ತೊಡುವ ಅಭ್ಯಾಸದವರು, ಅದರಲ್ಲೂ ಕೆಂಪು, ಕಿತ್ತಳೆ, ಹಳದಿ ಎಂದರೆ ಪ್ರಾಣ.

ನಿತ್ಯವೂ ಹೋಳಿ ಹುಳು ಮಾಡುವವರಂತೆ ಬಣ್ಣದ ಚೆಲ್ಲಾಟ ಅವರ ಬಟ್ಟೆಗಳಲ್ಲಿ, ಗಂಡಸರೂ ರಂಗುರಾಯರೇ, ಅವರ ಪಂಚೆ, ಅಂಗಿಗಳಲ್ಲಿ ರಂಗು ಕಾಣಿಸದಿದ್ದರೂ ಮುಂಡಾಸಿನ ಮೂವತ್ತು ಮೊಳಗಳಲ್ಲಿ ಮುನ್ನೂರು ಬಣ್ಣಗಳನ್ನು ಮೆರೆಯಿಸುವುದುಂಟು, ಸುತ್ತು ಸುತ್ತಿನ ಅವರ ದೇಶೀ ಮುಂಡಾಸನ್ನು ಚೆನ್ನಾಗಿ ಬಿಗಿದುಕೊಂಡಾಗ ಬಲು ಗಂಭೀರವಾಗಿಯೇ ಕಾಣಿಸುತ್ತದೆ,

ನಾವು ನಗರವನ್ನು ಕಳೆದು, ಸುಂದರವಾದ ರಸ್ತೆಗಳಲ್ಲಿ ಹಾದು, ಉನ್ನತ ಬೆಟ್ಟಗಳಿಗಭಿಮುಖವಾಗಿ ಹೊರಟೆವು.

ಇನ್ನೊಂದು ನಾಲ್ಕು ಮೈಲಿಗೆ, ಅಂಬೇರದ ಬೆಟ್ಟ ಸಿಗುತ್ತದೆ, ಅಂಬೇರ ಜಯಪುರದ ಪೂರ್ವಕಾಲದ ರಾಜಧಾನಿ, ಹಳೆಯ ಕೋಟೆ, ಅರಮನೆಗಳೆಲ್ಲ ಅಲ್ಲಿವೆ, ಸಂಜೆ, ಮುಂಜಾನೆಗಳಲ್ಲಿ ಅಲ್ಲಿಯ ಗುಡ್ಡ, ಬೆಟ್ಟ ಹಾಗೂ ಕಣಿವೆಗಳು ಅಪೂರ್ವ ಮೋಹಕತೆಯನ್ನು ತಾಳುತ್ತವೆ.

ಹಿಂದೆ ನಾನು ಅಲ್ಲಿಗೆ ಹೋದಾಗ ಜನವಸತಿ ಇದ್ದಿರಲಿಲ್ಲ. ಹಲವಾರು ಪ್ರಾಚೀನ ಗುಡಿಗೋಪುರಗಳು ಗೂಬೆಯ ಮನೆಗಳಾಗಿದ್ದವು. ಈಗ ಹಾಗಿಲ್ಲ: ನೂರಾರು ಸಿಂಧಿ ಕುಟುಂಬಗಳು ಅಲ್ಲಿ ಮನೆ ಮಾಡಿಕೊಂಡಿವೆ.

ಅಂಬೇರದ ಬುಡದಲ್ಲಿ ಒಂದು ಪುಟ್ಟ ಕೆರೆ, ಕೆರೆಯ ನೋಟ ಸುಂದರವಾದ ನೋಟ, ಸುತ್ತಲಿನ ಮರಗಳಲ್ಲಿ ಎಳೆ ಹಸುರು ತಳಿರುಗಳು ಚಿಗುರಿದ್ದು, ಮರಗಳು ಹೆಚ್ಚಿಗೆ ಕಾಣಿಸುತ್ತಿದ್ದುವು.

ಕೆರೆಯ ಮಗ್ಗುಲಿನಿಂದ ಮುಂದುವರಿದರೆ, ಬಂದರ ಉದ್ಯಾನವೊಂದು ಕಾಣಸಿಗುತ್ತದೆ. ಬಳಿಯಲ್ಲೇ ಕೆಂಪು ಕಲ್ಲಿನ ಹಳೆಯ ಕಾಲದ ಕೆಲವೊಂದು ಸುಂದರ ಪ್ರತಿಮೆಗಳಿವೆ.

ಪ್ರಾಚೀನ ರಜಪೂತ ಕೆತ್ತನೆಯ ಸರಳತೆ, ವೈರಿ, ಭವ್ಯತೆಗಳಿಲ್ಲ. ಕಾಣಿಸುತ್ತವೆ. ಉದ್ಯಾನವನ್ನು ಹಾಯ್ದು ದಿಡ್ಡಿಯ ಬಾಗಿಲೊಂದನ್ನು ದಾಟಿ, ಕೋಟೆಯ ದಾರಿಯನ್ನು ಏರಿ ಹೋಗಬೇಕು.

ಏರುತ್ತ ಹೋದಂತೆ, ಕೆಳಗಿನ ಸ್ಫೋಟ ರಮಣೀಯವಾಗುತ್ತಾ ಹೋಗುವುದು, ನಾವು ಅವಸರ ಅವಸರವಾಗಿ ಕೋಟೆಯನ್ನು ಸೇರಿದೆವು, ಕೋಟೆಯ ಒಳಗೆ ಆರಮನೆ ಆರಮನೆಗೆ ಸಂಬಂಧಿಸಿದ ಸಭಾಂಗಣ ದೇವಾಲಯ ಮೊದಲಾದುವನ್ಅ ರಮನೆಯ ಮೊದಲ ಅಂತಸ್ತಿನಲ್ಲಿ ಮಟ್ಟ ದೇವಾಲಯವಿದೆ. ಈ ಪಟ್ಟ ಮಂದಿರ ಚಿತ್ರ ಕೆಲಸಗಳಿಂದ ಕೂಡಿದ ಹಾಲುಗಲ್ಲಿನ ರಚನೆಯಿಂದ ಕೂಡಿದೆ.

ಗೋಡೆಗಳೆಲ್ಲವೂ ಹಾಲುಗಲ್ಲಿನವೇ : ನೆಲವೂ ಅದರದ್ದೇ ಸ್ತಂಭಗಳೂ ಅವುಗಳದ್ದೇ, ಗುಡಿ ಚಿಕ್ಕದಾಗಿದ್ದರೂ ಶಾಂತವಾಗಿ ಉಣಿಸುವ ಮಂದಿರ, ಗುಡಿಯ ವಿಗ್ರಹ ಮಾತ್ರ ಆಕರ ಹಾಗೂ ಅಲಂಕಾರಗಳಿಂದ ಅಷ್ಟೊಂದು ಶೋಭಿಸದು.

ಇಲ್ಲಿಯ ಗುಡಿಯನ್ನು ನೋಡಿ, ಮೇಲಿನ ಅಂಗಳವನ್ನೇರಿ ಹೋದರೆ ದೊಡ್ಡದೊಂದು ಸಭಾಂಗಣ ಬರುತ್ತದೆ.

ಇದು ವಿಶಾಲವಾದ ಹಾಲುಗಲ್ಲಿನ ರಚನೆ, ಆದರೆ ಚಾವಣಿ, ರಜಪುತಾನದ ಶೈಲಿಯ ಕಮಾನು ಮತ್ತು ಕಂಬಗಳು ತುಂಬ ಲಲಿತವಾಗಿದ್ದು, ಪರಸ್ಪರ ಹೊಂದಿಕೊಂಡು, ಈ ರಚನೆಗೆ ಚೆಲುವನ್ನು ನೀಡಿವೆ, ಎದುರಿನ ಅಂಗಣವೂ ಸಾಕಷ್ಟು ವಿಶಾಲವಾಗಿದೆ.

ಇಲ್ಲಿಂದ ಮೂರನೆಯ ಅಂತಸ್ತಿಗೆ ಹೋದರೆ ರಾಜರ ಅಂತಃಪುರವನ್ನು ನೋಡಬಹುದು. ಇಲ್ಲಿನ ಕೆಲವು ಭಾಗಗಳಲ್ಲಿ ಚಂದ್ರಕಾಂತ ಶಿಲೆಯ ಸುಂದರ ಮಂಟಪಗಳಿವೆ.

ಶಿಲೆಯನ್ನು ಕತ್ತಿ ಬಣ್ಣದ ಕಲ್ಲುಗಳಿಂದ ಕೊರೆದು ತುಂಬಿಸಿದ ಲತಾಮಿಷಗಳ ಚಿತ್ರಾವಳಿಗಳೂ ಇವೆ, ಇನ್ನೊಂದೆರಡು ಚಾವಡಿಗಳು ಕನ್ನಡಿಯ ಚೂರುಗಳನ್ನು ಸುಣ್ಣದ ಲೆಯಲ್ಲಿ ಅಂಟಿಸಿ, ಚಿತ್ರವಿಚಿತ್ರ ಪರಪಗಳನ್ನು ನಿರ್ಮಿಸಿ ಅಲಂಕರಿಸಿದಂತಹ ಕಂಬ,

ಮುಚ್ಚಿಕೆಗಳುಳ್ಳ ರಚನೆ, ಕತ್ತಲಿನಲ್ಲಿ ದೀವಿಗೆ ಹೊತ್ತಿಸಿದಾಗ, ಲಕೋಪಲಕ್ಷ ಈ ಗಾಜಿನ ತುಣುಕುಗಳು, ಚಾವಡಿಗೆ ನಕ್ಷತ್ರಲೋಕದ ಸೊಬಗನ್ನು ಕೊಡುತ್ತವೆ ಅರಮನೆಯ ಮೊದಲನೆಯ ಮಟ್ಟದಲ್ಲಿ ಇನ್ನೊಂದು ಅಂತಃಮರವಿದೆ, ಅಲ್ಲೂ ಹಾಲುಗಲ್ಲಿನ ಚಾವಡಿ ಮತ್ತು ನೀರಿನ ಕಾರಂಜಿಗಳಿವೆ; ಚಿತ್ರ ಕೊರೆದು ಮಾಡಿದ ಹಾಲುಗಲ್ಲಿನ ನೀರ ಕಲುವೆಗಳಿವೆ. ಇವೆಲ್ಲ ರಜಪೂತ ಅರಸರುಗಳ ರಸಿಕ ಜೀವನದ ದ್ಯೋತಕಗಳು.

ಅವರಣದ ಹಿಂದುಗಡೆ ಇರುವ ತಗ್ಗಿನ ಕಣಿವೆಯ ತಳದಲ್ಲೇ ಕಾಣಿಸುತ್ತದೆ ಮೀರಾಬಾಯಿಯ ನೋಡಿದರೆ, ಅದರ ಸೊಬಗು ಚೆನ್ನಾಗಿ ಕಾಣುತ್ತದೆ, ನಕ್ಷತ್ರಾಕೃತಿಯನ್ನು ತುಂಬಿಕೊಂಡ ಗರ್ಭಗೃಹ, ನವರಂಗಗಳಿವೆ.

ಗುಡಿಯ ಸುಂದರ ಆವರಣವನ್ನು ನೋಡಿ ಹಿಗ್ಗಿ, ನಮ್ಮ ಟಾಂಗಾ ನಿಲ್ಲಿಸಿದಲ್ಲಿಗೆ ಮರಳಿ ಬಂದೆವು. ನಮ್ಮ ಜೀವ ತುಂಬ ದಣಿದಿತ್ತು.

ನಮ್ಮೆಲ್ಲರಿಗೂ ಬಾಯಾರಿಕೆ ಏರಿ ಹೋಗಿತ್ತು. ನಾವು ಬಂದವರೇ, ಹಾದಿಯ ಮಗ್ಗುಲಿನ ಒಂದು ಅಂಗಡಿಯ ಮುಂದೆ ಕುಳಿತು, ಬಣ್ಣಬಣ್ಣದ ಸೋಡಾ, ಲೆಮನೇಡ್ ಕುಡಿದೆವು. ಉಡುಗೆಯಲ್ಲಿ ಅಷ್ಟೆಲ್ಲ ಬಣ್ಣಗಳನ್ನು ತುಂಬಿಸಿ ತಿರುಗುವ ಅಲ್ಲಿನ ಜನ, ಮಾರುವ ಸೋಡಾ, ಲೆಮನೇಡ್‌ಗಳಿಗೂ ಕಡುಪಿನ ರಂಗನ್ನು ಕೊಟ್ಟಿದ್ದಾರೆ. ಅವನ್ನು ಕಂಡರೆ ಇದು ತಾಯಿಯೋ ಪಾನೀಯವೋ ಎಂಬ ಭ್ರಮೆ ಉಂಟಾಗುತ್ತದೆ. ನಮ್ಮ ಪಾಲಿಗೆ ದೊರೆತ, ಕುಡಿಯಬಹುದಾದ ಪಾನೀಯವೂ ಆದೊಂದೇ

ಸರಿ, ಮನೆಗೆ ಹೊರಟೆವು. ಆಗ ಗೋಧೂಳಿಯ ಸಮಯ, ಟಾಂಗಾ ಕುದುರೆ ಮೆಲ್ಲಗೆ ನಮ್ಮ ಮಾನವೀ ಹೊರೆಯನ್ನು ಎಳೆದುಕೊಂಡು ಸಾಗುತ್ತಲಿತ್ತು.

ಇಲ್ಲಿಂದ ಮುಂದೆ ತುಂಬ ಹೊಲಗಳು, ಹೊಲಗಳಲ್ಲಿ ಕೋಳಿ, ಕಾಗೆಗಳಿಗಿಂತ ಅಗ್ಗವಾಗಿ ಕಾಣಿಸುವ ನವಿಲಿನ ಹಿಂಡು, ನಿಜ, ನವಿಲುಗಳ ರಾಜ್ಯದಲ್ಲಿ ಬಣ್ಣದ ಕಣ್ಣು ಹುಟ್ಟಲು, ರಜಪುತಾನದ ಸ್ತ್ರೀಯರಿಗೆ ಬೇರೆ ಪ್ರೇರಣೆ ಬೇಕಿಲ್ಲ.

`ಮರುದಿನ ಬೆಳಿಗ್ಗೆ ಅಲ್ಲಿಗೆ ಸಮೀಪವಾಗಿರುವ ‘ಅಂತ್ರ ಮಂತ್ರ’ ನೋಡಲು ಹೋದವು. ‘ಜಂತ ಮಂತ್ರ’ ಹಳೆಯ ಕಾಲದ ಖಗೋಳವಿಜ್ಞಾನದ ಪರಿಶೀಲನಾಲಯ ೪೦೦-೫೦೦ ವರ್ಷಗಳ ಪೂರ್ವದಲ್ಲಿ, ಖಗೋಳಶಾಸ್ತ್ರಜ್ಞರು ಗಹ, ಸೂರ್ಯ ಚಂದ್ರ, ತಾರಾಮಂಡಲಗಳನ್ನು ಅಳೆದು, ಪರಿಶೀಲಿಸಿ ನೋಡುವ ಸಲುವಾಗಿ, ಇಲ್ಲಿ ವಿಚಿತ್ರವಾದ ಸಾಧನಗಳನ್ನು ನೆಟ್ಟಿದ್ದಾರೆ. ಇಂಥ ಹತ್ತೆಂಟು ವಿಧದ ಸಾಧನಗಳ

ವಿಚಿತ್ರ ರಚನೆಗಳಿವೆ, ಗಳಿಗೆ ಅಳೆಯುವುದಕ್ಕೆ, ಪ್ರತಿಯೊಂದು ತಿಂಗಳಿನಲ್ಲೂ ಸೂರ್ಯ, ನಕ್ಷತ್ರಗಳ ಗತಿ ಪರಿಶೀಲಿಸುವುದಕ್ಕೆ ಏನೇನೋ ಏರ್ಪಾಟುಗಳಿವೆ, ಪ್ರತಿಯೊಂದು ಸಾಧನದ ಮೇಲೂ ಅವುಗಳ ಉಪಯೋಗ ಮತ್ತು ಕಾಲವನ್ನು ಅಳೆಯುವ ರೀತಿ ಮೊದಲಾದುವನ್ನು ನಮೂದಿಸಿದೆ, ದೂರದರ್ಶಿಯ ಸಹಾಯವಿಲ್ಲದೆ, ಬರಿಗಣ್ಣಿನಿಂದಲೇ ಖಗೋಳದ ಗ್ರಹಗಳ ಗತಿಯನ್ನು ಅಳೆಯಲು ಮಾಡಿದ ಈ ಸಾಧನಗಳು, ಗಣಿತಕ್ಕೂ ಸೂಕ್ಷ್ಮ ಪರಿಶೀಲನೆಗೂ ಹಿರಿಯರು ಸಲ್ಲಿಸಿದ ಕಾಣಿಕೆ, ಸೂರ್ಯ ನಡುಬಾನಿನಲ್ಲಿ ನಿಂತು ನಮ್ಮ ತಲೆಯನ್ನು ಕೊರೆಯುತ್ತಿದ್ದನಾದುದರಿಂದ, ಇತರ ಸ್ಥಳಗಳನ್ನು ನೋಡುವ ಆಸೆ ಮರೆತು, ಮನೆಗೆ ಓಡಿ ಬಂದವು.

ಜಯಪುರದಲ್ಲಿ ಜಾನಪದ ನೃತ್ಯಗಳನ್ನು ನೋಡಬೇಕೆಂಬ ಹಂಬಲ ನನ್ನದಾಗಿತ್ತು, ಹಾಗಾಗಿ, ಮುಂಚಿತವಾಗಿಯೇ ಮಿತ್ರರಿಗೆ ನನ್ನ ಅಪೇಕ್ಷೆ ತಿಳಿಸಿದ್ರೆ, ಅವರು ಗೆಳೆಯರಿಗೆ ತಿಳಿಸಿ ಏರ್ಪಾಟು ಮಾಡಿದ್ದರು.

ಸಂಜೆಯಾಗುತ್ತಲೇ ಅಲ್ಲಿನ ಚೀಫ್ ಇಂಜಿನಿಯರ್ ಗೋಹಿನಾಥರಾಯರ ಮನೆಗೆ ಹೋದವು. ಅವರು ಮೈಸೂರಿನವರು, ಸದ್ಯ ಜಯಪುರದಲ್ಲೇ ಉದ್ಯೋಗ ಮಾಡಿಕೊಂಡು ಸ್ವಂತ ಮನೆಯಲ್ಲಿ ವಾಸವಾಗಿದ್ದಾರೆ.

ಅವರ ಸುಂದರ ಬಂಗಲೆ ಎದುರಿಗೆ ಹೆಚ್ಚಹಸುರಿನ ಬಯಲಿನ ಒಂದು ತುಣಕು ಜಾಗವಿದೆ, ಅಲ್ಲೇ ನೃತ್ಯ ಕಾರ್ಯಕ್ರಮ, ಊರಿನ ಜನಸಾಮಾನ್ಯರ ನೃತ್ಯವು ಇಬ್ಬರು ಹೌವನಸ್ಥರು ಸ್ತ್ರೀಯರ ಉಡುಗೆ ಉಟ್ಟಿದ್ದರು, ಮಾರವಾಡಿ ಸ್ತ್ರೀಯರಂತೆ ತನಗೆ ಸೆರಗು ಹಾಕಿಕೊಂಡು, ಮುಖತೋರಿಸದೆ ಕುಣಿಯತೊಡಗಿದರು.

ಹಿಮ್ಮೇಳಕ್ಕೆ ಡೋಲು ತಮಟೆಗಳಿದ್ದವು, ಮುಂಭಾಗದಲ್ಲಿ ಸ್ತ್ರೀವೇಷದ ನರ್ತಕರು ಶಾಸ್ತ್ರವೆಸಗಿದರು, ಅವರ ಕಾಲಿನ ನಡಿಗೆಯಲ್ಲೂ ಕೈಗಳ ವಲಸೆಯಲ್ಲೂ ಪಾಣೆ ಚೆಲುವುಗಳೆರಡೂ ಅವರ ಜತೆಗೆ ಮೂರು, ನಾಲ್ಕು ಹುಡುಗರು ನಿತ್ಯದ ಉಡುಗೆಯಲ್ಲಿ ಕುಣಿದಾಡಿದರು.

ಆ ನೋಟವನ್ನು ನೋಡುವುದಕ್ಕೆ ಪುರವಣಿಗರೂ ಒಂದು ಕಲೆತರು, ನಮಗಾಗಿ ಒಂದೇ ದಿನದ ಏರ್ಪಾಟಿನಿಂದ ಕಾರ್ಯಕ್ರಮವನ್ನು ಏರ್ಪಡಿಸಿದ ಮಿತ್ರರಿಗೆ ನಾನು ತುಂಬಾ ಕೃತಜ್ಞನಾಗಿರುವ ಕೆಲಸವಾದ ಮೇಲೆ, ಗೋಪೀನಾಥರ ಆತಿಥ್ಯ ಸ್ವೀಕರಿಸಿ ಮನೆಗೆ ಮರಳಿದೆವು.

Author
Language Kannada
No. of Pages168
PDF Size20 MB
CategoryText Book
Source/Creditsdrive.google.com

Related PDFs

TS 9th Class Telugu Textbook PDF

Related PDFs

D.El.Ed Text Book PDF In Malayalam

9ನೇ ತರಗತಿ ಕನ್ನಡ ಪುಸ್ತಕ – 9th Std Kannada Text Book PDF Free Download

Leave a Comment

Your email address will not be published. Required fields are marked *

error: Content is protected !!