9ನೇ ತರಗತಿ ಕನ್ನಡ ಹೊಸಹಾಡು ಪದ್ಯದ ನೋಟ್ಸ್ | 9th Standard Hosa Haadu Kannada Poem Notes PDF

‘9ನೇ ತರಗತಿ ಕನ್ನಡ ಹೊಸಹಾಡು ಪದ್ಯದ ನೋಟ್ಸ್’ PDF Quick download link is given at the bottom of this article. You can see the PDF demo, size of the PDF, page numbers, and direct download Free PDF of ‘9th Class Hosa Haadu Kannada’ using the download button.

9ನೇ ತರಗತಿ ಕನ್ನಡ ಹೊಸಹಾಡು ಪದ್ಯದ ನೋಟ್ಸ್ – 9th Standard Hosa Haadu Kannada Poem Notes Book PDF Free Download

ಕನ್ನಡ ಹೊಸಹಾಡು

ಪದ್ಯ ಭಾಗ – 1

1. ಹೊಸಹಾಡು    –  ಕಯ್ಯಾರ ಕಿಞ್ಞಣ್ಣ ರೈ

ಹೊಸಹಾಡು ಪದ್ಯದ ಕವಿ ಪರಿಚಯ

ಕೃತಿಕಾರರ ಪರಿಚಯ

ಕಯ್ಯಾರ ಕಿಞ್ಞಣ್ಣ ರೈ ಅವರು ಕ್ರಿ ಶ 1915 ರಲ್ಲಿ ಕಾಸರಗೋಡು ಜಿಲ್ಲೆಯ ಕಯ್ಯಾರ ಗ್ರಾಮದಲ್ಲಿ ಜನಿಸಿದರು . ಶ್ರೀಮುಖ , ಐಕ್ಯಗಾನ , ಪುನರ್ನವ ಚೇತನ ಮತ್ತು ಕೊರಗ , ಗಂಧವತಿ ಕವನ ಸಂಕಲನಗಳನ್ನ ವಿರಾಗಿಣಿ ನಾಟಕವನ್ನು ರಚಿಸಿದ್ದಾರೆ .

ಅನ್ನದೇವರು ಮತ್ತು ಇತರೆ ಕಥೆಗಳು ಸಣ್ಣಕಥಾ ಸಂಕಲನ , ರತ್ನಾಕರ , ಪರಶುರಾಮ , ಎ . ಬಿ . ಶೆಟ್ಟಿ ಜೀವನ ಚರಿತ್ರೆ , ದುಡಿತವೇ ನನ್ನ ದೇವರು- ಆತ್ಮಕಥೆ , ಗೋವಿಂದ ಪೈ – ಸ್ಮೃತಿ ಕೃತಿ , ಸಾಹಿತ್ಯ ದೃಷ್ಟಿ – ವಿಮರ್ಶಾ ಕೃತಿ , ಪಂಚಮಿ – ಅನುವಾದ ಕೃತಿ ,

ಶ್ರೀಯುತರಿಗೆ 1969 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , 2005 ರಲ್ಲಿ ಆಳ್ವಾಸ್ ನುಡಿಸಿರಿ ಪ್ರಶಸ್ತಿ , 2006 ರಲ್ಲಿ ನಾಡೋಜ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಗೌರವಗಳು ಲಭಿಸಿವೆ .

ಪ್ರಸ್ತುತ ಪದ್ಯವನ್ನು ಕಯ್ಯಾರ ಕಿಞ್ಞಣ್ಣ ರೈ ಅವರು ಸಂಪಾದಿಸಿರುವ ಶತಮಾನದ ಗಾನ ಕವನಸಂಕಲನ ( ಪುಟ . 18-20 ) ದಿಂದ ಆಯ್ದು ಸಂಪಾದಿಸಿ ನಿಗದಿಪಡಿಸಿದೆ.

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .

1. ಕವಿ ಎಂತಹ ಹಾಡು ಹಾಡಬೇಕೆಂದು ಬಯಸುವರು ?

ಉತ್ತರ ನವಭಾವ , ನವಜೀವನ , ನವಶಕ್ತಿ ತುಂಬಿಸುವ ಹಾಡನ್ನು ಹಾಡಬೇಕು ಎಂದು ಕವಿ ಬಯಸುವರು ,

2. ವೀರಧ್ವನಿ ಹೇಗೆ ಏರಬೇಕು ?

ಉತ್ತರ : ತೀವ್ರತರಹ ಗಂಭೀರ ಭಾವನೆಯ ತೆರೆ ಮಸಗಿ ವೀರ ಧ್ವನಿ ಏರಬೇಕು

3. ಕಡಿದೊಗೆಯಬೇಕಾದ ಪಾಠಗಳು ಯಾವುವು ? 

ಉತ್ತರ : ಜಾತಿ , ಕುಲ , ಮತ , ಧರ್ಮ ಈ ಪಾಶಗಳನ್ನು ಕಡಿದೊಗೆಯಬೇಕು .

4. ಹಾಡು ನುಡಿಗುಂಡುಗಳು ಯಾವುದರ ಬೆನ್ನಟ್ಟಬೇಕು ?

ಉತ್ತರ : ಹಾಡಿನ ನುಡಿಗುಂಡುಗಳು ಭಯದ ಬೆನ್ನಟ್ಟಬೇಕು .

5 , ಬಾನು ಬುವಿ ಯಾವುದರಿಂದ ಬೆಳಗಬೇಕು ?

ಉತ್ತರ : ಜಡನಿದ್ರೆಯಿಂದ ಸಿಡಿದೆದ್ದು ವೀರ ಅಟ್ಟಹಾಸದಲ್ಲಿ ಭಾನು ಮತ್ತು ಭುವಿಯು ಬೆಳಗಬೇಕು

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯದಲ್ಲಿ ಉತ್ತರಿಸಿ ,

1 ಕವಿ ಎಂತಹ ಹಾಡನ್ನು ಹಾಡಿದಾಗ ವೀರಧ್ವನಿಯೇರಬೇಕು ಎಂದು ಬಯಸುತ್ತಾರೆ ?

ಉತ್ತರ : ಬದುಕಿಗೆ ಹೊಸ ತಿರುವನ್ನು ನೀಡಬಲ್ಲ . ಹೊಸ ಆಶಯವನ್ನು , ಜೀವನದ ಗತಿಯನ್ನು ಬದಲಿಸಿ ಹೊಸ ಹುರುಪನ್ನು ತುಂಬಬಲ್ಲ ಹೊಸ ಭಾವನೆ , ಹೊಸ ಜೀವನ ಹಾಗೂ ಹೊಸ ಶಕ್ತಿ ತುಂಬಿ ತುಳುಕುವ ಹಾಡನ್ನು ಹಾಡಬೇಕು .

ಈ ಹಾಡನ್ನು ಗಂಭೀರವಾದ ಭಾವನೆಗಳಿಂದ ಹಾಡಬೇಕು . ಆಗ ವೀರಧ್ವ ಮುಗಿಲೆತ್ತರಕ್ಕೆ ಬರಬೇಕು ಎಂದು ಕವಿ ಬಯಸುತ್ತಾರೆ . ,

2. ಕವಿ ಎಂತಹ ಹಾಡು ಗುಡುಗಬೇಕು ಎಂದು ಆಶಿಸುತ್ತಾರೆ ?

ಉತ್ತರ : ಹಳೆಯ ಮೌಡ್ಯವನ್ನು ಕಡಿದೊಗೆದು ಹೊಸ ಭಾವನೆಗಳನ್ನು ಸೃಜಿಸಬಲ್ಲ ಹೊಸ ಹಾಡನ್ನು ಹಾಡಬೇಕು , ಜಾತಿ , ಕುಲ , ಮತ , ಧರ್ಮ ಪಾಠಗಳನ್ನು ಕಡಿದೊಗೆಯಬೇಕು

ಸ್ವಾಭಿಮಾನದಿಂದ ಆತ್ಮವಿಶ್ವಾಸದಿಂದ ಎದೆಯೆತ್ತಿ ಹಾಡನ್ನು ಹಾಡಬೇಕು ಆ ಹಾಡು : ಯುಗಯುಗ ಕಳೆದರೂ , ಲೋಕ ಲೋಕಗಳ ಆಚೆಯೂ ಗುಡುಗಿನ ರೀತಿಯಲ್ಲಿ ಪ್ರತಿಧ್ವನಿಸಬೇಕು ಎಂದು ಕವಿ ಆಶಿಸುತ್ತಾರೆ .

3 . ಈ ಹಾಡು ಹೊಸತು ಎಂದು ಕವಿ ಹೇಳಲು ಕಾರಣವೇನು ?

ಉತ್ತರ : ‘ ಜಯಜನನಿ , ಶಿರವೆತ್ತಿ ವೀರಭರವಸೆಯಿಂದ ಹೊಸಹಾಡ ಕೇಳಿ ನೋಡು ; ಇದೋ ಮೊದಲು ಮುನ್ನಿಲ್ಲ … ಮುಗಿದಾದಂದಿನ ಪಾಡು ಹೊಸತಿಂದು ಹೊಸತು ಹಾಡು ” ಕವಿ ವೀರ ಭರವಸೆಯನ್ನು ಮೂಡಿಸುವ ಹಾಡನ್ನು ಒಮ್ಮೆ ಕೇಳಿ ನೋಡಬೇಕೆಂದು ಜಗಜ್ಜನನಿಯಲ್ಲಿ ಪ್ರಾರ್ಥಿಸುತ್ತಾರೆ .

ಏಕೆಂದರೆ ಹಾಡಿನಲ್ಲಿ ಅಂದಿನ ಪಾಡು ಮುಗಿದು , ಇಂದು ಹೊಸ ಹುರುಪಿನೊಂದಿಗೆ ಹೊಸ ಹಾಡನ್ನು ಹಾಡುತ್ತಿದ್ದರೆ , ಆದ್ದರಿಂದ ಕವಿ ಈ ಹಾಡು ಹೊಸದು ಎಂದು ಹೇಳಿದ್ದಾರೆ .

ಇ) ಕೊಟ್ಟಿರುವ ಪ್ರಶ್ನೆಗೆ ಎಂಟು – ಒಟ್ಟು ವಾಕ್ಯಗಳಲ್ಲಿ ಉತ್ತರಿಸಿ .

1. ಹೊಸಹಾಡು ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .

ಉತ್ತರ : ಬದುಕಿಗೆ ಹೊಸ ತಿರುವನ್ನು ನೀಡಬಲ್ಲ , ಹೊಸ ಆಶಯವನ್ನು , ಜೀವನದ ಗತಿಯನ್ನು ಬದಲಿಸಿ ಹೊಸ ಹುರುಪನ್ನು ತುಂಬಬಲ್ಲ . ಹಳೆಯ ಮೌಡ್ಯವನ್ನು ಕಡಿದೊಗೆದು ಹೊಸ ಭಾವನೆಗಳನ್ನು ಸೃಜಿಸಬಲ್ಲ ಹೊಸ ಹಾಡನ್ನು ಹಾಡಬೇಕು .

ಆ ಹಾಡು ಎಲ್ಲರಲ್ಲೂ ಕ್ರಾಂತಿಯನ್ನುಂಟು ಮಾಡಬೇಕು , ಅದರ ಮಾರ್ದನಿಗಳು ಭೂಮಿ – ಆಕಾಶದಲ್ಲಿ ತುಂಬಬೇಕು , ಎಲ್ಲ ಕೀಳರಿಮೆಗಳನ್ನು ಕಡಿದೊಗೆದು , ಹೊಸ ಹುರುಪನ್ನು ತುಂಬುವ ಹಾಡು ಇದಾಗಿದೆ .

ಹೊಸಹಾಡು ಪ್ರಕೃತಿ ಜೀವನದ ಕಣಕಣದಲ್ಲೂ ಹೇಗೆ ಸಮ್ಮಿಳಿತಗೊಂಡಿದೆ ಎಂದು ಸೊಗಸಾಗಿ ವರ್ಣಿಸಿದ್ದಾರೆ . ಹೊಸಭಾವನೆ , ಹೊಸಜೀವನ ಹಾಗೂ ಹೊಸ ಶಕ್ತಿಯಿಂದ.

.      ತುಂಬಿ ತುಳುಕುವ ಹಾಡನ್ನು ಒಮ್ಮೆಯಾದರು ಹಾಡಬೇಕು ಹರಿತವಾದ ಗಂಭೀರವಾದ ಭಾವನೆಗಳು ಅಲೆಅಲೆಯಾಗಿ ಹರಡುವ ರೀತಿಯಲ್ಲಿ ವೀರಧ್ವನಿಯು ಮುಗಿಲೆತ್ತರಕ್ಕೆ ಏರಬೇಕು ಜಾತಿ , ಕುಲ , ಧರ್ಮ , ಮತ ಪಾಶಗಳನ್ನು ಕಡಿದೊಗೆಯಬೇಕು .

ಎದೆಯುಬ್ಬಿಸಿ ಆತ್ಮವಿಶ್ವಾಸದಿಂದ ಸ್ವಾಭಿಮಾನದಿಂದ ಹಾಡನ್ನು ಹಾಡಬೇಕು ಆ ಹಾಡು ಅತ್ಯುನ್ನತವೂ ಶ್ರೇಷ್ಟವೂ ಆದ ಹಿಮಾಲಯದ ಶಿಖರವನ್ನೇರಿ ಹಾಡಬೇಕು .

ಆಹಾಡಿನ ನುಡಿಗುಂಡುಗಳು ಹತ್ತು ದಿಕ್ಕುಗಳಲ್ಲಿ ಹಾರಿ ಶತ್ರುಗಳಲ್ಲಿ ಭಯವನ್ನುಂಟುಮಾಡಿ ಅವರನ್ನು ಓಡಿಸಿ ಮಾರ್ದನಿಸಬೇಕು . ಇಂತಹ ಸ್ಪೂರ್ತಿಯ ಚಿಲುಮೆಯಾಗುವ ಹಾಡನ್ನು ಹಾಡಬೇಕು , ಅದು ನಿತ್ಯ ನೂತನವಾಗಿರಬೇಕೆಂಬುದು ಈ ಪದ್ಯದ ಸಾರಾಂಶವಾಗಿದೆ .

ಈ ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,

1. ವತರ ಗಂಭೀರ ಭಾವನೆಯ ತರ ಮಸ  ವೀರವನಿರಬೇಕು

” ಆಯ್ಕೆ : ಈ ವಾಕ್ಯವನ್ನು ಕಯ್ಯಾರ ಕಿಞ್ಞಣ್ಣ ರೈ ಅವರು ಸಂಪಾದಿಸಿರುವ ` ಶತಮಾನದ ಗಾನ ‘ ಕವನಸಂಕಲನ ದಿಂದ ಆಯ್ದು ‘ ಹೊಸಹಾಡು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಈ ಮಾತನ್ನು ಕವಿ ಹೇಳಿದ್ದಾರೆ , ಹೊಸಹಾಡು ನವಭಾವ ನವಜೀವನ , ನವಶಕ್ತಿಯನ್ನು ತುಂಬಿಸುವಂತಿರಬೇಕು ಎಂದು ಹೇಳುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ .

ಸ್ವಾರಸ್ಯ : ಹಾಡಿಗೆ ಮನುಷ್ಯನ ಬದುಕಿಗೆ ಹೊಸ ತಿರುವನ್ನು ಕೊಡುವ ಶಕ್ತಿಯಿದೆ . ಅಂತಹ ಹಾಡನ್ನು ಗಂಭೀರವಾದ ಭಾವನೆಗಳಿರಬೇಕು ವೀರಧ್ವನಿಯನ್ನು ಮೂಡಿಸಬೇಕು ಎಂಬುದು ಸ್ವಾರಸ್ಯಕರವಾಗಿದೆ .

2 ” ಯುಗಯುಗಗಳಾಚೆಯಲ್ಲಿ ಲೋಕಲೋಕಾಂತರದಲ್ಲಿ ಆ ಹಾಡು ಗುಡುಗಬೇಕು ”

ಆಯ್ಕೆ : ಈ ವಾಕ್ಯವನ್ನು ಕಯ್ಯಾರ ಕಿಞ್ಞಣ್ಣ ರೈ ಅವರು ಸಂಪಾದಿಸಿರುವ ‘ ಶತಮಾನದ ಗಾನ ‘ ಕವನಸಂಕಲನ ದಿಂದ ಆಯ್ದು ‘ ಹೊಸಹಾಡು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ ,

ಸಂದರ್ಭ ಈ ಮಾತನ್ನು ಕವಿ ಹೇಳಿದ್ದಾರೆ . ಜಾತಿ , ಕುಲ , ಮತ ಧರ್ಮಗಳ , ಪಾಠಗಳನ್ನು ಕಡಿದೊಗೆದು ಹಾಡನ್ನು ಹಾಡಬೇಕು . ಈ ಹಾಡು ಯುಗಯುಗಗಳಾಚಿ , ಲೋಕಲೋಕಗಳಾಚೆ ಕೇಳಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ .

ಸ್ವಾರಸ್ಯ : ಸಮಾಜದಲ್ಲಿರುವ ಜಾತಿ , ಕುಲ , ಮತ , ಧರ್ಮಗಳ ಪಾಠಗಳು ನಾಶವಾಗಿ ಮನುಜ ವೃತದ ಹಾಡು ಕೇಳಬೇಕು ಎಂಬ ಕವಿಯ ಭಾವನೆಯು ಸ್ವಾರಸ್ಯಕರವಾಗಿದೆ .

3. “ ಜಡನಿದ್ರೆ ಸಿಡಿದೆದ್ದ ವೀರಾಟಹಾಸದಲಿ ಬಾನು ಭುವಿ ಬೆಳಗಬೇಕು

” ಆಯ್ಕೆ : ಈ ವಾಕ್ಯವನ್ನು ಕಯ್ಯಾರ ಕಿಞ್ಞಣ್ಣ ರೈ ಅವರು ಸಂಪಾದಿಸಿರುವ ` ತತಮಾನದ ಗಾನ ‘ ಕವನಸಂಕಲನ ‘ ದಿಂದ ಆಯ್ದು ‘ ಹೊಸಹಾಡು ‘ ಎಂಬ ಪದ್ಯಭಾಗದಿಂದ ಅಧಿಸಲಾಗಿದೆ ,

ಸಂದರ್ಭ : ಈ ಮಾತನ್ನು ಕವಿ ಹೇಳಿದ್ದಾರೆ . ನಾವು ಜಡನಿದ್ರೆಯಿಂದ ಎಚ್ಚರಗೊಂಡು ವೀರ ಅಟ್ಟಹಾಸದಲ್ಲಿ ಭಾನು ಭುವಿ ಬೆಳಗಬೇಕು ಹೀಗೆ ಹೊಸ ಹಾಡು ಹೇಗೆ ಮತ್ತು ಯಾವುದನ್ನು ಬೆಳಗಬೇಕು ಎಂದು ವಿವರಿಸುವ ಸಂದರ್ಭದಲ್ಲಿ ಈ ಮಾತು ಬಂದಿದೆ .

ಸ್ವಾರಸ್ಯ : ಸಮಾಜದಲ್ಲಿ ಬದಲಾವಣೆಯ ಗಾಳಿ ಬೀಸಬೇಕಾದರೆ ಮೊದಲು ಹಳೆಯ ಮೌಡ್ಯಗಳು ದೂರವಾಗಬೇಕು ಎಂಬುದು ಸ್ವಾರಸ್ಯಕರವಾಗಿದೆ .

4. “ ನಡೆನುಡಿಗಳೆಡೆಯಲ್ಲಿ ಪದತಾಳ ಗತಿಯಲ್ಲಿ ಕಾಂತಿಕಿಡಿ ಕೆರಳಬೇಕು

” ಆಯ್ಕೆ : ಈ ವಾಕ್ಯವನ್ನು ಕಯ್ಯಾರ ಕಿಟ್ಟಣ್ಣ ರೈ ಅವರು ಸಂಪಾದಿಸಿರುವ ‘ ಶತಮಾನದ ಗಾನ ‘ ಕವನಸಂಕಲನ ದಿಂದ ಆಯು ‘ ಹೊಸಹಾಡು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಸರಿ ಉತ್ತರಗಳು 1. ಜಗ

ಸಂದರ್ಭ : ಈ ಮಾತನ್ನು ಕವಿ ಹೇಳಿದ್ದಾರೆ . ಹೊಸ ಹಾಡಿನ ಗತಿ , ಪ್ರಗತಿ ಹೇಗಿರಬೇಕು , ಆ ಹಾಡು ಯುಗಯುಗ ಕಳೆದರೂ , ಲೋಕ ಲೋಕಗಳ ಆಚೆಯೂ ಗುಡುಗಿನ ರೀತಿಯಲ್ಲಿ ಪ್ರತಿಧ್ವನಿಸಬೇಕು ಕ್ರಾಂತಿಯ ಕಿಡಿಯನ್ನು ಹೊತ್ತಿಸಬೇಕು ಎಂದು ಹೇಳುವ ಸಂದರ್ಭ್ರದಲ್ಲಿ ಈ ಈ ಮಾತು ಬಂದಿದೆ * ಶಾಂತಿ

ಸ್ವಾರಸ್ಯ : ಹಾಡು ಶೃಂತಿಕಾರಿಯಾಗಿದ್ದರೆ ಮಾತ್ರ ಜಡವಾದ ಜನರ ಮನಸ್ಸಿನಲ್ಲಿ ಜಾಗೃತಿಯನ್ನು ಮೂಡಿಸಲು ಸಾಧ್ಯ ಎಂಬುದು ಸ್ವಾರಸ್ಯಕರವಾಗಿ ಕವಿ ಹೇಳಿದ್ದಾರೆ .

5. ಇದೋ : ಮೊದಲು ಮುನ್ನಿಲ್ಲ – ಮುಗಿದುದಂದಿನ ಪಾಡು ಹೊಸತಿಂದು ಹೊಸತು ಹಾಡು

” ಆಯ್ಕೆ : ಈ ವಾಕ್ಯವನ್ನು ಕಯ್ಯಾರ ಕಿ ರೈ ಅವರು ಸಂಪಾದಿಸಿರುವ ‘ ಶತಮಾನದ ಗಾನ ‘ ಕವನಸಂಕಲನ ‘ ದಿಂದ ಆಯ್ದು ‘ ಹೊಸಹಾಡು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ ,

ಸಂದರ್ಭ : ವೀರ ಭರವಸೆಯನ್ನು ಮೂಡಿಸುವ ಹಾಡನ್ನು ಒಮ್ಮೆ ಕೇಳಿ ನೋಡಬೇಕೆಂದು ಜಗಜ್ಜನನಿಯಲ್ಲಿ ಪ್ರಾರ್ಥಿಸುತ್ತಾರೆ . ಏಕೆಂದರೆ ಹಾಡಿನಲ್ಲಿ ಅಂದಿನ ಪಾಡು ಮುಗಿದು , ಇಂದು ಹೊಸ ಹುರುಪಿನೊಂದಿಗೆ ಹೊಸ ಹಾಡನ್ನು ಹಾಡಬೇಕು ಎಂದು ಕವಿ ಹೇಳುವ ಸಂದರ್ಭವಾಗಿದೆ .

ಆಶಯ ಭಾವ

ಬದುಕಿಗೆ ಹೊಸ ತಿರುವನ್ನು ನೀಡಬಲ್ಲ , ಹೊಸ ಆಶಯವನ್ನು ಜೀವನದ ಗತಿಯನ್ನು ಬದಲಿಸಿ ಹೊಸ ಹುರುಪನ್ನು ತುಂಬಬಲ್ಲ , ಹಳೆಯ ಮೌಡ್ಯವನ್ನು ಕಡಿದೊಗೆದು ಹೊಸ ಭಾವನೆಗಳನ್ನು ಸೃಜಿಸಬಲ್ಲ ಹೊಸ ಹಾಡನ್ನು ಹಾಡಬೇಕು ,

ಆ ಹಾಡು ಎಲ್ಲರಲ್ಲೂ ಕಾಂತಿಯನ್ನುಂಟು ಮಾಡಬೇಕು ಆದರ ಮಾರ್ಧನಿಗಳು ಭೂಮಿ – ಆಕಾಶದಲ್ಲಿ ತುಂಬಬೇಕು . ಎಲ್ಲ ಕೀಳರಿಮೆಗಳನ್ನು ಕಡಿದೊಗೆದು , ಹೊಸ ಹುರುಪನ್ನು ತುಂಬುವ ಹಾಡು ಇದಾಗಿದೆ .

ಇಂತಹ ಸ್ಫೂರ್ತಿಯ ಚಿಲುಮೆಯಾಗುವ ಹಾಡನ್ನು ಹಾಡಬೇಕು ಅದು ನಿತ್ಯ ನೂತನವಾಗಿರಬೇಕೆಂಬುದು ಪದ್ಯದ ಆಶಯವಾಗಿದೆ

ಪದಗಳ ಅರ್ಥ

ಕಲಕಂಠ – ಇಂಪಾದ ಧ್ವನಿ

ತೀವ – ಹರಿತ , ರಭಸ

ಪದತಳ – ಕಾಲಿನ ಕೆಳಗೆ

ಮಸಗು – ಹರಡು

ಲೋಕಾಂತ – ಲೋಕಗಳನ್ನು ಮೀರಿದ

ತರ – ತರಂಗ ,

ನವ – ಆಕಾಶ

ಬೆನ್ನಟ್ಟು – ಓಡಿಸಿಕೊಂಡು ಹೋಗು

ಮಾರ್ದನಿ – ಪ್ರತಿಧ್ವನಿ

ಹಿಮಾದ್ರಿ – ಹಿಮಪರ್ವತ

Author
Language Kannada
No. of Pages7
PDF Size4 MB
CategoryPoetry
Source/Creditskannadadeevige.in

9ನೇ ತರಗತಿ ಕನ್ನಡ ಹೊಸಹಾಡು ಪದ್ಯದ ನೋಟ್ಸ್ – 9th Standard Hosa Haadu Kannada Poem Notes Book PDF Free Download

Leave a Comment

Your email address will not be published. Required fields are marked *

error: Content is protected !!