7ನೇ ತರಗತಿ ಕನ್ನಡ ಪಠ್ಯಪುಸ್ತಕ | 7th Standard Kannada Textbook PDF

‘7ನೇ ತರಗತಿ ಕನ್ನಡ ಪಠ್ಯಪುಸ್ತಕ’ PDF Quick download link is given at the bottom of this article. You can see the PDF demo, size of the PDF, page numbers, and direct download Free PDF of ‘Kannada Textbook Class 7 solutions’ using the download button.

7ನೇ ತರಗತಿ ಕನ್ನಡ ಪಠ್ಯಪುಸ್ತಕ – 7th Standard Kannada Text Book PDF Free Download

7ನೇ ತರಗತಿ ಕನ್ನಡ

ಪುಟ್ಟಣ್ಣ ಪುಟ್ಟಜ್ಜಿ ಕತೆ ಹೇಳು ಅಂದರೆ, ‘ಬಾ ಮಗ ಹೇಳೀನಿ ಒಳ್ಳೆದೊಂದು ಕತೆಯ ಅಂತಾಳೆ ಪುಟ್ಟಜ್ಜಿ, ಕತೆಹೇಳುವುದರಲ್ಲಿ ನಮ್ಮ ಪುಟ್ಟಜ್ಜಿ ಯಾವಾಗಲೂ ತಪ್ಪು, ದೊಡ್ಡ ಕತೆ, ಸಣ್ಣ ಕತೆ, ಪುಟಾಣಿ ಕತೆ, ತಮಾಷ ಕತೆ, ಹಾದ್ಯತೆ ಹೀಗೆ ತರಾವರಿ ಕತೆ ಹೇಳುತ್ತಾಳೆ. ಪುಟ್ಟಜ್ಜಿ, ಮೊನ್ನೆ ನಾನು ಪುಟ್ಟಜ್ಜಿ ಮನೆ ಕಡೆ ಹೋಗಿದ್ದೆ. ಪುಟ್ಟಟ್ಟೆ ಮನೆ, ಜಗಲಿ ಮೇಲೆ ಕೂತಿದ್ದಳು. ಅವಳು ಸಂತಸದಿಂದ ಇದ್ದಾಳೆ ಅಂ ಅವಳ ಮುಖವೇ ಹೇಳುತ್ತಿತ್ತು. “ಪುಟ್ಟಜ್ಜಿ ಪುಟ್ಟ ಕತೆ ಹೇಳುತೀಯಾ?” ಅಂತ ಕೇಳಿದ,

“ಬಾ ಮಗ ಹೇಳ್ತಿನಿ ಒಳ್ಳೇದೊಂದು ಕತೆಯಾ” ಅಂದಳು.

ಅವಳ ಮನೆ ಜಗಲಿ ಹತ್ತಿ ಕಂಬಕ್ಕೆ ಒರಗಿ ಕೂತು ಅವಳ ಮುಖ ನೋಡಿದೆ,”ಯಾವ ಕತೆ ಹೇಳಲಿ” “ಯಾವದಾದರೂ ಒಂದು ಹಾಡ್ಯತೆ ಹೇಳು” ಅಂದು ಪುಟ್ಟಪ್ಪ ಸ್ಮಷಾಲಿಟಿ ಅಂದರೆ ಹಾಡ್ಯತೆ, ಅದರಲ್ಲಿ ಹಾಡೂ ಇರುತ್ತೆ. ಕತೇನೂ ಇರುತ್ತೆ.

ಪುಟ್ಟಜ್ಜಿ: ಗಂಟಲು ಸರಿಪಡಿಸಿಕೊಂಡಳು. ಹಾಗೇ ತಣ್ಣನೆ ಗಾಳಿ ಬೀಸಿದ ಹಾಗೆ ಹೇಳಲಿಕ್ಕೆ ಪ್ರಾರಂಭ ಮಾಡಿದಳು.

ಪುಟ್ಟದೊಂದು ಊರ ಹೊರಗೆ ಒಂದು ಹಳ್ಳ ಹರಿದಿದೆ.

ಹಳ್ಳ ಅಲ್ಲಿ ಹರಿದು ಹರಿದು ಊರ ಜನರ ಪೊರದಿದ ಹರಿವ ಹಳ್ಳಿ ಊರಿಗೊಂದು ಸೊಬಗ ತಂದು ಕೊಟ್ಟಿದ ಹಸಿರು ಕಾಡು ಮನಗಳಲ್ಲಿ ಹಕ್ಕಿ ಹಾಡು ಕೇಳಿದ

ಇಂತಹ ಒಂದು ಸೊಗಸಾದ ಸ್ಥಳದಲ್ಲಿ ಆ ಕಾಲದಲ್ಲಿ ಜನ ಇರಲಿಲ್ಲ. ಹಳ್ಳ ತನ್ನ ಪಾಡಿಗೆ ತಾನು ಹರಿದು ಹೋಗುತ್ತಾ ಇತ್ತು, ಪಕ್ಕೆಗಳು ಹಾಡಿಕೊಂಡಿದ್ದವು.

ಒಂದು ದಿನ ಬಹಳ ದೂರದಿಂದ ಒಬ್ಬ ಯುವಕ ಅಲ್ಲಿಗೆ ಬಂದ.

ಇಲ್ಲಿ ಇಷ್ಟೊಂದು ಚೆನ್ನಾಗಿದೆಯಲ್ಲ ಅಂತ ಅಲ್ಲಿ ಉಳಿಯೋ ಯೋಚನೆ ಮಾಡಿದ, ಒಂದು ಮನೆ ಕಟ್ಟಿದ, ಮನೆ ಮುಂದೆ ತೋಟ ಮಾಡಿದ. ತನಗೆ ಏನು ಬೇಕೋ ಅದನ್ನು ಬೆಳೆಸಿಕೊಂಡು ಅಲ್ಲಿ ಉಳಿದ, ಹಳ್ಳ, ಹಳ್ಳದ ದಡದಲ್ಲಿ ಇವನ ಮನೆ, ಮನೆಯ ಹಿಂದೆಯೇ ಭಾರೀ ಕಾಡು, ಅಲ್ಲಿ ಹುಲಿ, ಚಿರತೆ, ಕಾಡುಕೋಣ, ಆನೆ ಎಂದೆಲ್ಲ ಕಾಡುಪ್ರಾಣಿಗಳು, ಈ ಯುವಕನಿಗೆ ಯಾವುದೇ ಭೀತಿ ಇರಲಿಲ್ಲ.

ಏಕೆಂದರೆ ಇವನು ಅವುಗಳ ಸುದ್ದಿಗೇ ಹೋಗುತ್ತಿರಲಿಲ್ಲ. ಅವೂ ಇವನ ಸುದ್ದಿಗೆ ಬರುತ್ತಿರಲಿಲ್ಲ. ಅವರವರ ಪಾಡಿಗೆ ಅವರೆಲ್ಲ ಸುಖವಾಗಿ ಇದ್ದರು. ಇವನ ಮನೆಯ ಹತ್ತಿರವೇ ಪ್ರಾಣಿಗಿಂಡಿ ಇದ್ದಿತು.

ಅಲ್ಲಿಗೆ ಬಂದು ಪ್ರಾಣಿಗಳೆಲ್ಲ ನೀರು ಕುಡಿದು ಹೋಗುತ್ತಿದ್ದವು. ಒಂದು ದಿನ ಯುವಕ ಮನೆ ಜಗಲಿ ಮೇಲೆ ಕುಳಿತಿದ್ದಾನೆ. ಆಗ ಹೆದರಿ ಗಾಬರಿಯಾದ ಒಂದು ಜಿಂಕೆ ಅಂಗಳಕ್ಕೆ ಧಾವಿಸಿ ಬಂದಿತು.

ಆ ಜಿಂಕೆಯ ಕುತ್ತಿಗೆಯಲ್ಲಿ ಒಂದು ಗೆಜ್ಜೆ ವೇಳೆ ಇತ್ತು. ಜಿಂಕೆಯ ಮೈ ನಡುಗುತ್ತಿತ್ತು. ಈ ಜಿಂಕೆ ಹೀಗೆ ಓಡಿ ಬರಲು ಒಂದು ಕಾರಣವಿತ್ತು.

ಕಾಡಿನಲ್ಲಿ ಒಂದು ಹುಲಿ

ಜಿಂಕೆಯನ್ನು ಕಂಡಿತು

ಅದರ ಬೆನ್ನು ಹತ್ತಿ ಹುಲಿ

ಹಳ್ಳದೆಡೆಗೆ ಬಂದಿತು

ಪ್ರಾಣಭಯದಿ ಜಿಂಕೆ ಬಂದು ಮನೆಯನೊಂದ ಹೊಕ್ಕಿತು ನನ್ನ ಪ್ರಾಣ ಉಳಿಸು ಎಂದು ನೆಯೊಡೆಯನ ಕೇಳಿತು.

ಈ ಯುವಕನಿಗೆ ಜಿಂಕೆ ಹುಲಿಗೆ ಹೆದರಿ ಅಲ್ಲಿ ಬಂದಿದೆ ಅನ್ನುವುದು ತಿಳಿಯಿತು.

ಅವನು ಎದ್ದು ಅದನ್ನ ಅಪ್ಪಿಕೊಂಡು ಅದಕ್ಕೆ ಸಾಂತ್ವನ ನೀಡಿದ. ಅದೇ ಸಮಯಕ್ಕೆ ಒಂದು ಹುಲಿ ಬಂದು ಯುವಕನ ಮನೆಯ ಮುಂದೆ ನಿಂತಿತು. “ಏಯ್ ಯುವಕ, ಈ ಜಿಂಕೆ ನನ್ನ ಆಹಾರ, ನೀನು ಇದಕ್ಕೆ ರಕ್ಷಣೆ ನೀಡಿದರೆ ಅದು ಅರಣ್ಯ ನಿಯಮಕ್ಕೆ ವಿರೋಧವಾಗುತ್ತದೆ. ಜಿಂಕೆಯನ್ನ ಬಿಟ್ಟುಕೊಡು” ಎಂದಿತು ಹುಲಿ,

“ನೋಡು, ಇದು ಅರಣ್ಯದ ಜಿಂಕೆಯಲ್ಲ.

ಯಾರೋ ಸಾಕಿದ ಇದರ ಕುತ್ತಿಗೆಯಲ್ಲಿ ಗೆಜ್ಜೆ ಇದೆ. ಅರಣ್ಯದ ಪ್ರಾಣಿಯನ್ನು ಕೊಂದು ತಿನ್ನಲು ಹೀಗೆ ಅಧಿಕಾರವಿದೆ. ಆ ಯಾರೋ ಸಾಕಿದ ಪ್ರಾಣಿಯನ್ನು ಕೊಲ್ಲಲು ನಿನಗೆ ಅಧಿಕಾರವಿಲ್ಲ. ನಾನು ಇದನ್ನ ಬಿಟ್ಟು ಕೊಡುವುದಿಲ್ಲ” ಎಂದು ಆ ಯುವಕ ಹುಲಿಗೆ ಉತ್ತರ ನೀಡಿದ, ಈ ಮಾತು ಕೇಳಿ ಹುಲಿಗೆ ಸಿಟ್ಟು ಬಂದಿತು. ಆ ಸಿಟ್ಟಿನಲ್ಲಿ ಅದು ಅಬ್ಬರಿಸಿತ್ತು.

ಯುವಕ ಜಿಂಕೆಗೆ ತನ್ನ ಮನೆಯೊಳಗೆ ಆಶ್ರಯ ನೀಡಿ ಹುಲಿಯನ್ನು ಎದುರಿಸಿದ. ತನ್ನಲ್ಲಿ ರಕ್ಷಣೆ ಬೇಡಿ ಬಂದವರನ್ನು ತಾನು ಬಿಟ್ಟುಕೊಡಲಾರೆ ಎಂದ.

ಹುಲಿಗೂ ಆ ಯುವಕನಿಗೂ ಗಳವಾಯಿತು. ಹುಲಿ ಯುವಕನನ್ನು ಸಿಕ್ಕಲ್ಲಿ ಕಚ್ಚಿತು. ಗಾಯ ಮಾಡಿತು, ಕಷ್ಟಪಟ್ಟು ಬದುಕು ಸಾಗಿಸುತ್ತಿದ್ದ ಯುವಕ ಸೋಲಲಿಲ್ಲ. ಹುಲಿ ಕೊನೆಗೆ ಸೋತು ಪಲಾಯನ ಪರಿಸಿತು, ಮತ್ತೆ ನಾನು ನಿನ್ನ ಸಹವಾಸಕ್ಕೆ ಬರುವುದಿಲ್ಲ ಅಂದಿತು.

ಹುಲಿ, ಅದಕ್ಕೂ ಹೊಡೆದು ಬಡಿದು ಗಾಯ ಮಾಡಿದ್ದ ಯುವಕ, ಜಿಂಕೆ ಯುವಕನ ಸ್ಥಿತಿಯನ್ನು ನೋಡಿತು, ಪಾಪ ಎಂದು ಮರುಗಿತು. “ನನ್ನನ್ನು ಉಳಿಸಲು ಹೋಗಿ ನಿನಗೆ ಹೀಗಾಯಿತೇ” ಎಂದು ಕಣ್ಣೀರು ಸುರಿಸಿತು. ಹಾಗೆಯೇ ಕಾಡಿಗೆ ಹೋಗಿ

ಸೊಪ್ಪು ಸದ ಬೇರು, ತೊಗಟೆ

ಎಲ್ಲವನ್ನ ತಂದಿತು ಅರೆದು ಕುಟ್ಟಿ ಮದ್ದುಮಾಡಿ ಗಾಯಗಳಿಗೆ ಹಚ್ಚಿತು ಗಾಯ ಮಾಗಿ ಅವನು ಮತ್ತೆ ಎದ್ದು ನಡೆಯತೊಡಗಿದ ಇದನ್ನು ಕಂಡು ಜಿಂಕೆಗಾಯ್ತು ಅಪರಿಮಿತ ಆನಂದ

ಹೀಗೆ ಆ ವೆಂಕೆಗೂ ಆ ಯುವಕನಿಗೂ ಏನೋ ಸಂಬಂಧಕೂಡಿ ಬಂದಿತು. ಆದರೂ ಜಿಂಕೆಯ ಮನಸ್ಸಿನಲ್ಲಿ ಏನೋ ಚಿಂತೆ ಇರುವುದನ್ನು ಯುವಕ ಗಮನಿಸಿದ.

ಒಂದು ದಿನ ಯುವಕ ಏನೋ ಮಾಡುತ್ತ ಅಂಗಳದಲ್ಲಿ ಕುಳಿತಿದ್ದಾನೆ, ಅಷ್ಟು ದೂರದಲ್ಲಿ ಮಲಗಿದ್ದ ಜಿಂಕೆ ತಟ್ಟನೆ ಎದ್ದು ನಿಂತಿದೆ.

ಹೊರಗೆ ಕಿವಿಗೊಟ್ಟು ಏನನ್ನೋ ಕೇಳುತ್ತಿದೆ. ಆಗ ಯುವಕನ ಮನೆಯ ಹತ್ತಿರವೇ ಒಂದು ಇಂಪಾದ ದನಿ ಕಳಿಸುತ್ತಿದೆ. ಜಿಂಕೆ ಮತ್ತೂ ಸಂಭ್ರಮದಿಂದ ಎದ್ದು ನಿಲ್ಲುತ್ತದೆ.

“ಚುಕ್ಕಿ ಎಲ್ಲಿದ್ದಿಯಾ….. ಚುಕ್ಕಿ ಎಲ್ಲಿದ್ದಿಯಾ?” ಜಿಂಕೆ ಹೊರ ಓಡುತ್ತದೆ, ಯುವಕ ಗಾಬರಿಯಿಂದ ಅದರ ಹಿಂದೆ ಓಡುತ್ತಾನೆ, ಅಲ್ಲಿ ಓರ್ವ ಯುವತಿ ಜಿಂಕೆಯನ್ನು ತಬ್ಬಿ ಹಿಡಿದಿದ್ದಾಳೆ. ಜಿಂಕೆ ಅವರ ಕೈ ನೆಕ್ಕುತ್ತಿದೆ. ಅವಳ ಮೈಗೆ ತನ್ನ ಮೈ ತಿಕ್ಕುತ್ತಿದೆ. ಆಕೆ ಜಿಂಕೆಯ ಮುಖಕ್ಕೆ ತನ್ನ ಮುಖ ತಾಗಿಸಿ ಅಳುತ್ತಿದ್ದಾಳೆ.

ಆ ಯುವತಿ ಈ ಯುವಕನನ್ನು ನೋಡಿದ ಕೂಡಲೇ ತನ್ನ ಪರಿಚಯ ಹೇಳಿಕೊಂಡಳು,

“ಇದು ನಾವು ಸಾಕಿಕೊಂಡ ಜಿಂಕೆ…. ಇದರ ಮೇಲಿನ ಈ ಚುಕ್ಕೆಯ ಗುರುತಿಗೆ ಇದಕ್ಕೆ ನಾವು ಚುಕ್ಕಿ ಎಂದು ಕರೆದವು.. ಇದು ಕೆಲ ದಿನಗಳ ಹಿಂದೆ ಕಾಡಿಗೆ ಬಂದುಬಿಟ್ಟಿತು….. ಇದನ್ನ ಒಂದು ಹುಲಿ ಅಟ್ಟಿಸಿಕೊಂಡು ಬಂದುದನ್ನ ಕೆಲ ಹಳ್ಳಿ ಜನ ನೋಡಿದರು… ಚುಕ್ಕಿಯ ಕತೆ ಮುಗಿಯಿತು ಅಂತ ನಾವು ತಿಳಿದೆವು….. ಆದರೂ ನನಗೆ ಏನೋ ನಂಬಿಕೆ ಮುಕ್ಕಿ ಬದುಕಿದೆ ಎಂದು… ನಾನು ಅವತ್ತಿನಿಂದ ಅದನ್ನ ಹುಡುಕುತ್ತಿದ್ದೆ. ಇಂದು ಇದು ಸಿಕ್ಕಿವೆ…!

ಆ ಯುವತಿ ಸಂತಸದಿಂದಲೇ ಇದೆಲ್ಲವನ್ನು ನುಡಿದಳು.

ಆ ಯುವಕ ತಾನು ಚುಕ್ಕಿಯನ್ನ ಉಳಿಸಿದ ಕತೆ ಹೇಳಿದ. ಹುಲಿಗೂ ತನಗೂ ನಡೆದ ಹೋರಾಟದಲ್ಲಿ ತನಗಾದ ಗಾಯಗಳನ್ನು ತೋರಿಸಿದ. ಚುಕ್ಕಿಯು ಕಾಡಿನಲ್ಲಿ ಮದ್ದು ಮಾಡಿದ್ದನ್ನು ಹೇಳಿದ.

“ಇವರು ಇವತ್ತಿನಿಂದ ನಿಮ್ಮ ಟೀಚರು. ಇವರು ನಿಮಗೆ ಏನೆಲ್ಲಾ ಕಲಿಸಿಕೊಡುತ್ತಾರೆ. ನೋಡ್ತಾ ಇರಿ” – ಮಳೆಗಾಲ ತೀವ್ರಗೊಳ್ಳುತ್ತಿದ್ದ ಆ ದಿನ ಮಾಂಡವಿ ಹೊಸಾ ಟೀಚರನ್ನು ಮಕ್ಕಳಿಗೆ ಪರಿಚಯಿಸಿದರು, ಗಾ ಅವರನ್ನು ಸರಿಯಾಗಿ ನೋಡಿದಳು, ಮೊದಲನೆಯದಾಗಿ, ಆತ’ ವೇಷಭೂಷಣದಿಂದ ಟೀಚರರಂತೆ ಕಾಣುತ್ತಿರಲಿಲ್ಲ, ತುಂಬಾ ಹಳೆಯದಾದ ಒಗೆದ ಪಂಚೆಯೊಂದನ್ನು ಸೊಂಟಕ್ಕೆ ಸುತ್ತಿ ಮೇಲಕ್ಕೆ ಎತ್ತಿ ಕಟ್ಟಿದ್ದರು.

ಒಗೆದ ಚೌಕುಳಿ ಚೌಕುಳಿಯ ಅಂಗಿ, ಅದಕ್ಕಿಂತ ಹಳೆಯ ಟವೆಲಿನಿಂದ ತಲೆಗೆ ಲಪ್ಪಟೆ ಸುತ್ತಿಕೊಂಡಿದ್ದರು. ಅವರು ಪಂಚ ಸುತ್ತಿರುವ ರೀತಿ ಅಭ್ಯಾಸವಿಲ್ಲವೆಂದು ಎಷ್ಟು ಚೆನ್ನಾಗಿ ಗೊತ್ತಾಗುತ್ತಿತ್ತೆಂದರೆ, ಚಡ್ಡಿಗೆ ದೊರೆತ ಪ್ರಾಮುಖ್ಯ ಪಂಚೆಗೆ ಸಿಗದೆ ಅದು ತುಂಬಾ ಅಮುಖ್ಯನಂತೆ ಮುದುರಿ ಕುಳಿತಿತ್ತು.

ಮಕ್ಕಳಿಗೆಲ್ಲಾ “ಇವರೆಂತಾ ಟೀಚರವಾಗಿ ಎಂದು ನಿರಾಸೆಯೂ ಕುತೂಹಲವೂ ಆಗಿತ್ತು.

ಮಾಂಡವಿಯ ಆದೇಶದಂತೆ ಮಕ್ಕಳೆಲ್ಲಾ ಹಳ್ಳದ ದಂಡೆಯಲ್ಲಿ ಕೂಡಿಕೊಂಡರು. ತುಂಗಾಗೆ ತಾನು ಆ ಟೀಚರನ್ನು ಎಲ್ಲೋ ನೋಡಿದ್ದೇನೆ ಅನ್ನಿಸುತ್ತಿತ್ತು.

ಎಲ್ಲಿ ಎನ್ನುವುದು ಅಷ್ಟು ಸುಲಭವಾಗಿ ಹೊಳೆಯಲಿಲ್ಲ. ಆತನ ಸ್ನೇಹಮಯ ಮುಖ ಬಿಸಿಲು-ಮಳೆ ಚಳಿಗಳಿಗೆ ಪಕ್ಕಾಗಿ ಕರಗೆ ಸುಕ್ಕುಗಟ್ಟಿತ್ತು. ಆತ ತಲೆಗೆ ಸುತ್ತಿದ ಲಪ್ಪಟೆಯಂತೂ ತೀರಾ ಪರಿಚಿತವಾಗಿತ್ತು. “ಹಾಂ, ಹೌದು ನೆನಪಾಯಿತು, ಪ್ರತಿಸಲ ಸಾಮೇರ ಮನೆ ಆಲೆಮನೆಗೆ ಕೋಣ ಹೊಡೆದು ತರುವ ಸೀನಸೆಟ್ಟರು ಇವರು.

ತಮ್ಮ ಮೂರೆಕರೆ ಜಮೀನಿನಲ್ಲಿ ತಪ್ಪದೆ ಸಾಸಿವೆ ಬೆಳೆಯುತ್ತಿದ್ದ ಒಬ್ಬರೇ ರೈತ ಇವರು, ತುಂಗಾಳ, ದೂರದ ಸಂಬಂಧಿಯಾದ ಸೀನಸೆಟ್ಟರಿಗೂ ಇವಳ ನೆನಪಿತ್ತು, ಪ್ರೀತಿಯಿಂದ ಅವಳ ತಲೆ ಸವರಿ, “ಎಂತಾ, ಮಗಾ, ಆರಾಮಾ? ಅವ್ವ ಅಪ್ಪಯ್ಯ ಚಂದ್ರ ಅದಾರಾ?” ಎಂದು ಕೇಳಿದರು. ‘ಓ’ ತುಂಗಾ ಸ್ವಲ್ಪ ಜೋರಾಗೇ ಹೇಳಿದಳು. ಹೊಸ ಟೀಚರು ತನ್ನ ಪರಿಚಯಸ್ಥರು ಎಂದು

ಇತರ ಮಕ್ಕಳೆದುರಿಗೆ ತೋರಿಸಿಕೊಳ್ಳುವುದು ಅವಳಿಗೆ ಹೆಮ್ಮೆಯೆನಿಸಿತ್ತು.

Author
Language Kannada
No. of Pages160
PDF Size10 MB
CategoryTextbook
Source/Creditsdrive.google.com

Related PDFs

D.El.Ed Text Book PDF In Malayalam

7ನೇ ತರಗತಿ ಕನ್ನಡ ಪಠ್ಯಪುಸ್ತಕ – 7th Standard Kannada Text Book PDF Free Download

Leave a Comment

Your email address will not be published. Required fields are marked *

error: Content is protected !!