ನೀಲಿ ಕೊಡೆ – The Blue Umbrella Book PDF Free Download

Some Text From Book
ಮೋಮೊ ಎಂಬುದು ಒಂದು ಚಿಕ್ಕ ಹುಡುಗಿಯ ಹೆಸರು. ಅವಳು ನ್ಯೂಯಾರ್ಕದಲ್ಲಿ ಹುಟ್ಟಿದಳು. ಅವಳ ತಂದೆ – ತಾಯಿ ಕೂಡ ನ್ಯೂಯಾರ್ಕದಲ್ಲಿ ಇರುತ್ತಿದ್ದರು.
ಮೋಮೊ ಎಂದರೆ ಜಪಾನಿನಲ್ಲಿ ಪೀಚ ಹಣ್ಣು. ಅವಳ ಮೂರನೆಯ ಹುಟ್ಟು ಹಬ್ಬದ ದಿನ! ಮೋಮೊಗೆ ಎರಡು ಕಾಣಿಕೆಗಳು ದೊರೆತವು. ಒಂದು ರಬ್ಬರ ಬೂಟುಗಳು ಇನ್ನೊಂದು ಅಂದವಾದ ಚಿಕ್ಕ ನೀಲಿ ಕೊಡೆ!!
ಅವಳು ತುಂಬ ಸಂತಸಪಟ್ಟಳು. ನಡುರಾತ್ರಿಯಲ್ಲಿ ಕೂಡ ಎದ್ದು ಅವುಗಳನ್ನು ನೋಡುತ್ತಿದ್ದಳು. ಆದರೆ ಇನ್ನೂ ಅಲ್ಲಿ ಬಿಸಿಲುಗಾಲವಿತ್ತು.
ಆಕಾಶದಲ್ಲಿ ಸೂರ್ಯನು ಹೊಳೆಯುತ್ತಿದ್ದನು. ದಿನಾಲು ಮುಂಜಾನೆ ಅವಳ ತಾಯಿಯು ಅವಳನ್ನು ನರ್ಸರಿ ಶಾಲೆಗೆ ಒಯ್ಯುತ್ತಿದ್ದಾಗ “ಇನ್ನೂ ಮಳೆ ಏಕೆ ಬೀಳಲೊಲ್ಲದು?”
ಎಂದು ಕೇಳುತ್ತಿದ್ದಳು. “ಸ್ವಲ್ಪ ತಡೆ, ಮಳೆ ಬೀಳುತ್ತದೆ.” ಎಂದು ತಾಯಿ ಸಂತೈಸುತ್ತಿದ್ದಳು. ಒಂದು ದಿನ ಮೋಮೊಳಿಗೆ ತಾಳ್ಮೆ ಸಾಲಲಿಲ್ಲ
ಸೂರ್ಯನು ಇನ್ನಷ್ಟು ರಭಸದಿಂದ ಹೊಳೆಯುತ್ತಿದ್ದನು. ಆಗ ಅವಳಿಗೆ ಒಂದು ವಿಚಾರ ಹೊಳೆಯಿತು. ಕೂಡಲೆ ಜಿಗಿಯುತ್ತಲೆ ತನ್ನ ಕೈಯಲ್ಲಿಯ ಹಾಲಿನ ಗ್ಲಾಸಿನಲ್ಲಿಯ ಬಿಸಿಲನ್ನು ನೋಡುತ್ತ “ನನಗೆ ಕೊಡೆ ಒಯ್ಯಲೇಬೇಕು.
ಬಿಸಿಲಿನಲ್ಲಿ ನನ್ನ ಕಣ್ಣುಗಳು ಉರಿಯುತ್ತವೆ.” “ಕೊಡೆ ಇಲ್ಲದೆನೇ ನೀನು ಇಳಿಬಿಸಿಲಿನ ಆನಂದವನ್ನು ಸವಿಯಬಹುದು. ಮಳೆಗಾಲಕ್ಕಾಗಿಯೇ ಕೊಡೆ ಇರಲಿ.” ಎಂದು ತಾಯಿ ತಿಳಿಹೇಳಿದಳು.
ಮರುದಿನ ಮೋಮೊ ಇನ್ನೂ ನೊಂದುಕೊಂಡಿಯೇ ಇದ್ದಳು. ಏಕೆಂದರೆ ಕೊಡೆ ಉಪಯೋಗಿಸಲು ಸಾಧ್ಯವಿರಲಿಲ್ಲ. ಇಷ್ಟರಲ್ಲಿ ಆಕೆಗೆ ಇನ್ನೊಂದು ವಿಚಾರ ಹೊಳೆಯಿತು.
ಅವಳು ಬೀದಿಯಲ್ಲಿಯ ಜನರನ್ನು ನೊಡುತ್ತಿದ್ದಳು. ಎಲ್ಲರ ಕೈಯಲ್ಲಿ ಕೊಡೆ! “ನಾನು ಇಂದು ನಿಶ್ಚಿತವಾಗಿ ಕೊಡೆ ಒಯ್ಯುವೆ. ಗಾಳಿಯಿಂದಾಗಿ ನನ್ನ ಕಣ್ಣುಗಳಿಗೆ ತೊಂದರೆ.”
“ಗಾಳಿಯು ನಿನ್ನ ಕೊಡೆಯನ್ನು ಹಾರಿಸಬಹುದು. ಕೊಡೆ ಮಳೆಗಾಲಕ್ಕಾಗಿಯೇ ಇರಲಿ.” ತಾಯಿಯ ಕಿವಿಮಾತು. ಎಷ್ಟೊಂದು ದಿನಗಳ ದಾರಿ ಕಾಯ್ದಾದ ಮೇಲೆ ಕೊನೆಗೆ ಮಳೆ ಬೀಳತೊಡಗಿತು.
ಮೋಮೊಳ ತಾಯಿ ಅವಳನ್ನು ನಿದ್ದೆಯಿಂದ ಎಬ್ಬಿಸಿದಳು. “ಏಳು! ಎದ್ದೇಳು! ನಿನಗಾಗಿ ಒಂದು ಅಚ್ಚರಿ ಸುದ್ದಿ!”
Author | P.K Nanavati |
Language | Kannada |
No. of Pages | 35 |
PDF Size | 3.1 MB |
Category | Novel |
ನೀಲಿ ಕೊಡೆ – The Blue Umbrella Book PDF Free Download