‘ಗಣರಾಜ್ಯೋತ್ಸವ ಭಾಷಣ ಕನ್ನಡ’ PDF Quick download link is given at the bottom of this article. You can see the PDF demo, size of the PDF, page numbers, and direct download Free PDF of ‘Republic Day Speech’ using the download button.
ಗಣರಾಜ್ಯೋತ್ಸವ ಭಾಷಣ ಕನ್ನಡ – Republic Day Speech In Kannada PDF Free Download
ಗಣರಾಜ್ಯೋತ್ಸವ ಭಾಷಣ ಕನ್ನಡ
ಗಣರಾಜ್ಯೋತ್ಸವ ದಿನಕ್ಕೆ ಇನ್ನು ಕೆವಲ ಎರಡು ದಿನ ಮಾತ್ರ ಬಾಕಿ ಉಳಿದಿದೆ. 74ನೇ ಗಣರಾಜ್ಯೋತ್ಸವವನ್ನು ದೇಶಾದ್ಯಂತ ಅದ್ಧೂರಿಯಾಗಿ ಆಚರಣೆ ಮಾಡಲು ಈಗಾಗಲೇ ಸಕಲ ಸಿದ್ಧತೆಗಳು ನಡೆಯುತ್ತಿವೆ. ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು ಹಾಗೂ ಇತರೆ ಸಂಘ ಸಂಸ್ಥೆಗಳಲ್ಲಿ ಗಣರಾಜ್ಯೋತ್ಸವ ದಿನವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ.
ಗಣರಾಜ್ಯೋತ್ಸವ ದಿನ, ಪ್ರತಿಯೊಬ್ಬ ಭಾರತೀಯ ಪ್ರಜೆಯು ಹೆಮ್ಮೆ ಪಡುವ ದಿನವಾಗಿದೆ. ಪ್ರತಿ ವರ್ಷ ಭಾರತದಲ್ಲಿ ಜನವರಿ 26 ರಂದು ಗಣರಾಜ್ಯೋತ್ಸವ ದಿನವನ್ನು ಆಚರಣೆ ಮಾಡಲಾಗುತ್ತದೆ. ಭಾರತದ ಇತಿಹಾಸದಲ್ಲೇ ಗಣರಾಜ್ಯೋತ್ಸವ ದಿನ ಮಹತ್ವದ ದಿನವಾಗಿದೆ.
ಈ ದಿನದಂದು ಇಡೀ ದೇಶವೇ ಸಂಭ್ರಮಿಸುತ್ತದೆ. ಈ ದಿನವು ದೇಶ ಸ್ವಾತಂತ್ರ್ಯೋತ್ತರ ಗಣರಾಜ್ಯ ದೇಶವಾದ ಐತಿಹಾಸಿಕ ದಿನ ಮತ್ತು ಸಂವಿಧಾನ ಜಾರಿಗೆ ಬಂದ ದಿನವಾಗಿದೆ. 2023ನೇ ಇಸವಿಯಲ್ಲಿ ಇರುವ ಭಾರತೀಯರಾದ ನಾವೆಲ್ಲರೂ ಜನವರಿ 26, 2023 ರಂದು 74ನೇ ಗಣರಾಜ್ಯೋತ್ಸವ ಆಚರಣೆಗೆ ಸಜ್ಜಾಗಿದ್ದೇವೆ.
ಕಳೆದ ಎರಡು ಮೂರು ವರ್ಷಗಳಿಂದ ಕೋವಿಡ್ ಹಿನ್ನಲೆಯಲ್ಲಿ ಶಾಲಾ, ಕಾಲೇಜುಗಳು, ಸರ್ಕಾರಿ ಕಚೇರಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಗಣರಾಜ್ಯೋತ್ಸವ ದಿನವನ್ನು ಸಂಭ್ರಮದಿಂದ ಆಚರಣೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಕೊರೊನಾ ಸೋಂಕು ಕಡಿಮೆಯಾಗಿರುವ ಹಿನ್ನಲೆಯಲ್ಲಿ ವಿಜೃಂಭಣೆಯಿಂದ ಗಣರಾಜ್ಯೋತ್ಸವ ಆಚರಣೆ ಮಾಡಲು ಸಕಲ ಸಿದ್ಧತೆಗಳು ನಡೆಯುತ್ತಿವೆ.
Republic Day 2023 : ಜನವರಿ 26 ರಂದೇ ಗಣರಾಜ್ಯೋತ್ಸವ ದಿನ ಆಚರಣೆ ಏಕೆ ? ಇಲ್ಲಿದೆ ಮಾಹಿತಿ
ಈ ದಿನದಂದು ಭಾರತದ ಸರ್ವ ಪ್ರಜೆಗೂ ಸಮಾನತೆ, ಶಿಕ್ಷಣ ಇತರೆ ಮೂಲಭೂತ ಹಕ್ಕುಗಳನ್ನು ನೀಡಿರುವ ಸಂವಿಧಾನವನ್ನು ಜಾರಿಗೆ ತರಲು ಶ್ರಮಿಸಿದ ಎಲ್ಲ ನಾಯಕರನ್ನು, ಅವರ ಸಾಧನೆಯನ್ನು ನೆನೆಯಲಾಗುತ್ತದೆ. ಹಾಗೂ ಅವರಿಗೆ ವಂದಿಸಲಾಗುತ್ತದೆ.
ಇಂದಿನ ಲೇಖನದಲ್ಲಿ 74ನೇ ಗಣರಾಜ್ಯೋತ್ಸವ ಭಾಷಣ ಸ್ಪರ್ಧೆಗೆ, ಪ್ರಬಂಧ ಸ್ಪರ್ಧೆಗೆ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಲ್ಲಿ ಸರಳ ಮತ್ತು ಉತ್ತಮ ಭಾಷಣಕ್ಕಾಗಿ, ಪ್ರಬಂಧ ಬರೆಯಲು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ಈ ಕೆಳಗಿನಂತೆ ಇರಲಿ ಗಣರಾಜ್ಯೋತ್ಸವ ಭಾಷಣ
ನನ್ನೆಲ್ಲಾ ನೆಚ್ಚಿನ ಶಿಕ್ಷಕರೇ, ಹಿರಿಯರೆ ಹಾಗೂ ಸಹಪಾಠಿಗಳೇ ಎಲ್ಲರಿಗೂ ನಮಸ್ಕಾರ. ಇಂದು ನಮಗೆಲ್ಲರಿಗೂ ತಿಳಿದಂತೆ ನಾವು ಭಾರತದ ಪ್ರಮುಖ ಐತಿಹಾಸಿಕ ದಿನವಾದ 74ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸಲು ಸೇರಿದ್ದೇವೆ. ಇಂದು ನಮ್ಮ ದೇಶದ ಬಗ್ಗೆ ಮತ್ತು ಸಂವಿಧಾನ ಜಾರಿಗೆ ಬಂದ ದಿನದ ಬಗ್ಗೆ ಸವಿನೆನಪು ಮಾಡಿಕೊಳ್ಳಲು ತುಂಬಾ ಕುತೂಹಲವಾಗುತ್ತಿದ್ದು, ನನಗೆ ಈ ಅವಕಾಶ ಸಿಕ್ಕಿರುವುದು ಖುಷಿ ತಂದಿದೆ.
ಇಂದು ಭಾರತದ ಸಂವಿಧಾನ ದಿನ : ಇತಿಹಾಸ, ಪ್ರಾಮುಖ್ಯತೆ ಹಾಗೂ ವಿದ್ಯಾರ್ಥಿಗಳ ಭಾಷಣಕ್ಕೆ ಟಿಪ್ಸ್ ಇಲ್ಲಿದೆ..
ಸ್ನೇಹಿತರೇ ಪ್ರತಿವರ್ಷ ಜನವರಿ 26 ರಂದು ಗಣರಾಜ್ಯ ದಿನವನ್ನಾಗಿ ಭಾರತದಲ್ಲಿ ಆಚರಣೆ ಮಾಡುತ್ತೇವೆ. ಈ ಸುಸಂದರ್ಭದಲ್ಲಿ ನಾನು ಭಾರತ ದೇಶದ ಒಬ್ಬ ಪ್ರಜೆಯಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ. ನಾವಿಂದು ಇಲ್ಲಿ ಸ್ವತಂತ್ರವಾಗಿ, ಶಿಸ್ತಿನಿಂದ ಇದ್ದೆವೇ ಎಂದರೆ ಅದಕ್ಕೆ ಮೂಲ ಕಾರಣ ನಮ್ಮ ಸಂವಿಧಾನ.
ನಾವು ಸಮಾನತೆಯಿಂದ, ಎಲ್ಲ ವರ್ಗದ ಜನರು ಸಮಾನವಾಗಿ ಶಿಕ್ಷಣ ಕಲಿಯುತ್ತಿರುವುದೇ ಸಂವಿಧಾನ ಜಾರಿಗೆ ಬಂದಿದ್ದರಿಂದ. ಭಾರತ ದೇಶದಲ್ಲಿ ಸಂವಿಧಾನ ಜಾರಿಗೆ ಬಂದಮೇಲೆಯೇ ಈ ದೇಶದ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳಾದ ಸಮಾನತೆ, ಸ್ವತಂತ್ರ, ಧರ್ಮ, ಸಂಸ್ಕೃತಿ, ಶಿಕ್ಷಣ ಮತ್ತು ಇತರೆ ಹಕ್ಕುಗಳು ಸಿಕ್ಕಿರುವುದು.
ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳಂತೆಯೇ, ನಾವುಗಳು ಈ ದೇಶದ ಪ್ರಜೆಗಳಾದ ಮೇಲೆ ನಿರ್ವಹಿಸಬೇಕಾದ ಮೂಲಭೂತ ಕರ್ತವ್ಯಗಳು ಸಹ ಇವೆ. ದೇಶದ ಸಂಪನ್ಮೂಲಗಳನ್ನು ಕಾಪಾಡುವುದು, ರಾಷ್ಟ್ರಗೀತೆ, ರಾಷ್ಟ್ರಧ್ವಜವನ್ನು ಗೌರವಿಸುವುದು, ಸರ್ಕಾರದ ನಿಯಮಗಳು, ಸಂವಿಧಾನದ ಆದರ್ಶಗಳನ್ನು ಪಾಲಿಸುವುದು ಹಾಗೂ ಇತರೆ ಜವಬ್ದಾರಿಗಳು ನಮ್ಮ ಮೇಲೆ ಇವೆ.
ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದ ಧ್ವಜಾರೋಹಣಕ್ಕೆ ಇರುವ ವ್ಯತ್ಯಾಸಗಳೇನು ಗೊತ್ತೆ?
ನಾವೆಲ್ಲರೂ ಸ್ವತಂತ್ರರಾಗಿ ಜೀವಿಸಲು, ಶಿಕ್ಷಣ ಪಡೆಯಲು ಅವಕಾಶ ನೀಡಿರುವ ಇಂತಹ ಸಂವಿಧಾನವನ್ನು ದೇಶದಲ್ಲಿ ಜಾರಿಗೆ ತರಲು ಶ್ರಮಿಸಿದ ಎಲ್ಲರಿಗೂ ಇಂದು ನಾವೆಲ್ಲರೂ ತಲೆ ಭಾಗಿಸಿ ನಮಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ, ಏಕತೆ, ಭ್ರಾತೃತ್ವ ಸ್ವಾತಂತ್ರ್ಯ ಭಾರತದ ಸಂವಿಧಾನದಲ್ಲಿ ಇರುವ ಐದು ಪ್ರಮುಖ ಮೌಲ್ಯಗಳಾಗಿವೆ.
ಆಗಸ್ಟ್ 15, 1947 ರಲ್ಲಿ ಬ್ರಿಟಿಷರಿಂದ ತಾತ್ವಿಕವಾಗಿ ಸ್ವಾತಂತ್ರ್ಯವನ್ನು ಪಡೆದುಕೊಂಡ ದಿನವಾದರೆ, ಜನವರಿ 26, 1950 ಭಾರತ ತನ್ನ ಸಂವಿಧಾನವನ್ನು ಜಾರಿಗೊಳಿಸಿದ ದಿನವಾಗಿದೆ. ರಾಜ ಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವದಲ್ಲಿ ತನ್ನ ನಿಜ ಅಸ್ಥಿತ್ವವನ್ನು ಸ್ಥಾಪಿಸಿದ ದಿನವಾಗಿದೆ. ಈ ಕಾರಣಕ್ಕಾಗಿ ಗಣರಾಜ್ಯೋತ್ಸವ ಭಾರತೀಯರ ಪಾಲಿಗೆ ಅತ್ಯಂತ ಮಹತ್ವದ ದಿನವಾಗಿದೆ.
ಭಾರತ ತನ್ನದೇ ಆದ ಸಂವಿಧಾನವನ್ನು ಜಾರಿಗೆ ತರುತ್ತಿದ್ದಂತಯೇ ಪ್ರಜಾಪ್ರಭುತ್ವ ಗಣರಾಜ್ಯವಾಗಿ ಬದಲಾಯಿತು. ಭಾರತಕ್ಕೆ ಉತ್ತಮ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಅಗತ್ಯ ಸಂವಿಧಾನದ ರಚನೆಗೆ, ರಚನಾ ಸಮಿತಿಯನ್ನು ನೇಮಿಸಲಾಗಿತ್ತು. 1947 ರ ಆಗಸ್ಟ್ 29 ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತದ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾದರು.
ನವೆಂಬರ್ 26,1949 ರಲ್ಲಿ ಭಾರತದ ಸಂವಿಧಾನವನ್ನು ಅಂಗೀಕರಿಸಲಾಯಿತು. ಪ್ರಜಾಪ್ರಭುತ್ವ ಸರ್ಕಾರ ವ್ಯವಸ್ಥೆಯೊಂದಿಗೆ ಜನವರಿ 26, 1950 ರಂದು ಸಂವಿಧಾನವನ್ನು ಭಾರತದಲ್ಲಿ ಜಾರಿಗೊಳಿಸಲಾಯಿತು. ಈ ಸಂವಿಧಾನವನ್ನು ರಷ್ಯಾ, ಬ್ರಿಟನ್, ಅಮೇರಿಕ, ಇತರೆ ಹಲವು ದೇಶಗಳ ಸಂವಿಧಾನದ ಪ್ರಮುಖ ಅಂಶಗಳ ಸಂಯೋಜನೆಯಾಗಿದೆ.
Language | Kannada |
No. of Pages | 2 |
PDF Size | 0.04 MB |
Category | Education |
Source/Credits | – |
Related PDFs
Pancharatna Kritis Lyrics with Swaras PDF
Madam Rides The Bus Class 10th Questions And Answers PDF
Republic Day Quiz Questions Answers in Malayalam PDF
Republic Day Speech In Kannada 2023 PDF
Independence Day Speech In English PDF
The Hack Driver Question Answers Class 10 PDF
ಗಣರಾಜ್ಯೋತ್ಸವ ಭಾಷಣ ಕನ್ನಡ – Republic Day Speech In Kannada PDF Free Download