ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ | Kannada Proverb(Gadegalu) PDF

‘ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ’ PDF Quick download link is given at the bottom of this article. You can see the PDF demo, size of the PDF, page numbers, and direct download Free PDF of ‘The Proverb In Kannada Expansion’ using the download button.

ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ – Gade Matugalu Kannadadalli Vistarane PDF Free Download

ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ- Kannada Proverb

೧. ತಾಳಿದವನು ಬಾಳಿಯಾನು / ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬಂದೀತೆ?

ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.

ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ಅತಿಯಾಗಿ ಕೋಪಮಾಡಿಕೊಳ್ಳದೆ ಸಮಾಧಾನದಿಂದ ಇರಬೇಕು. ಕೋಪ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದನ್ನು ತಿಳಿಸುತ್ತದೆ.

ಕೋಪಂ ಅನರ್ಥ ಸಾಧನಂ ಎಂಬ ಮಾತಿನಂತೆ ಕೋಪವು ಕೆಡುಕನ್ನು ಉಂಟುಮಾಡುತ್ತದೆ. ಕ್ಷಣಕಾಲ ಕೋಪದ ಕೈಗೆ ಬುದ್ದಿ ಕೊಟ್ಟರೆ ಅದು ನಮ್ಮನ್ನು ಮಾತ್ರವಲ್ಲದೆ ಅದಕ್ಕೆ ಗುರಿಯಾದವರನ್ನೂ ಅಪಾಯಕ್ಕೆ ನೂಕುತ್ತದೆ.

‘ಒಬ್ಬ ವ್ಯಕ್ತಿಯನ್ನು ನಾಶ ಪಡಸಬೇಕೆಂದರೆ ಆತನು ಕೋಪಗೊಳ್ಳಿವಂತೆ ಮಾಡಬೇಕು’ ಎಂಬ ಮಾತಿದೆ.

ಕುಂಬಾರನು ಹಲವು ದಿನಗಳು ಶ್ರಮ ಪಟ್ಟು ತಯಾರಿಸಿದ ಮಡಕೆಯನ್ನು ಒಂದು ದೊಣ್ಣೆಯಿಂದ ನಾಶ ಮಾಡಿದಂತ, ಕ್ಷಣಿಕ ಕೋಪವು ಅನಾಹುತವನ್ನು ಉಂಟುಮಾಡುತ್ತದೆ.

ಆದರೆ ಅದನ್ನು ಸರಿಪಡಿಸಲಾಗುತ್ತದೆಯೇ? ಕೋಪದಲ್ಲಿ ಕುಯ್ದುಕೊಂಡ ಮೂಗು ಶಾಂತವಾದ ನಂತರ ಚಿಂತಿಸಿದರೆ ಮತ್ತೆ ಸರರಿಂiಗುತ್ತದೆಯೇ? ಆದ್ದರಿಂದ ‘ತಾಳ್ಮೆಯಿಂದ ಆಲೋಚಿಸಿ, ಕೋಪವನ್ನು ಹಿಂದಿಕ್ಕಿ ಮುನ್ನಡೆದವರೇ ಜೀವನದಲ್ಲಿ ವಿಜಯಶಾಲಿಗಳಾಗಲು ಸಾಧ್ಯ.’ ಎಂಬುದು ಈ ಗಾದೆಯ ಆಶಯವಾಗಿದೆ.

೨. ಹಾಸಿಗೆ ಇದ್ದಷ್ಟು ಕಾಲು ಚಾಚು / ಅತಿ ಆಸೆ ಗತಿ ಕೆಡಿಸಿತು

ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.

ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು, ನಮ್ಮ ಆಸೆಗಳಿಗೆ ಇತಿ-ಮಿತಿಯಿರಬೇಕು ಎಂಬುದನ್ನು ತಿಳಿಸುತ್ತದೆ.

”ಆಸೆಯೇ ದುಃಖಕ್ಕೆ ಕಾರಣ’ ಎಂದು ಬುದ್ಧ ಹೇಳಿದ್ದಾನೆ. ಜೀವನದಲ್ಲಿ ಆನೆಯೇ ಇರಬಾರದೆಂದಲ್ಲ ಆದರೆ ಅದು ಅತಿಯಾಗದೆ ಮಿತವಾಗಿರಬೇಕು, ಅರಮನೆಯ ಸುಖಕ್ಕಿಂತ ನಮ್ಮಲ್ಲಿ ಲಭ್ಯವಿರುವಷ್ಟರಲ್ಲಿ ಬದುಕುವುದರಲ್ಲಿ ನೆಮ್ಮದಿ. ಇದೆ.

ಆಸೆಗಳು ಅತಿಯಾಗಿ ಆದಾಯ ಕಡಿಮೆ ಇದ್ದಾಗ ಸಾಲ ಮಾಡಬೇಕಾಗುತ್ತದೆ. ಅದ್ದರಿಂದ ಹಾಸಿಗೆ ಇದ್ದಷ್ಟು ಕಾಲುಚಾಚಬೇಕು, ಉಚಿತವಾಗಿ ಸಿಗುತ್ತದೆಂದು ಅಗತ್ಯಕ್ಕಿಂತ ಹೆಚ್ಚು ಸಂಗ್ರಹಣೆ ಮಾಡಲು ಪ್ರಯತ್ನಿಸಬಾರದು.

ಹಾಗ ಮಾಡಿದರೆ ‘ಪ್ರತಿದಿನ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕುಯ್ದು ಹಾಕಿದ ಮೂರ್ಖನ ಕಥೆಯಂತೆ” ಅತಿಯಾಸೆಯಿಂದಾಗಿ ಇದ್ದದ್ದನ್ನೂ ಕಳೆದುಕೊಳ್ಳಬೇಕಾಗುತ್ತದೆ.

ಎಂದು ಈ ಗಾದೆಯ ಆಶಯವಾಗಿದೆ.

ಬಸವಣ್ಣನವರು ಹೇಳಿರುವಂತೆ ‘ನುಡಿದರೆ ಮುತ್ತಿನ ಹಾರದಂತೆ, ಮಾಣಿಕ್ಯದ ದೀಪ್ತಿಯಂತ, ಸ್ಪಟಿಕದ ಶಲಾಕೆಯಂತೆ’ ಇರಬೇಕು, ಅಂದರೆ ನಮ್ಮ ಮಾತು ಇತರರಿಗೆ ನೋವುಂಟು ಮಾಡದಂತೆ ಹಿತ-ಮಿತ-ಮೃದುವಾಗಿರಬೇಕು. ಇಲ್ಲದಿದ್ದರೆ, ಅದು ಅನಾಹುತಕ್ಕೂ ಕಾರಣವಾಗುತ್ತದೆ, ಎಂಬುದು ಈ ಗಾದೆಯ ಆಶಯವಾಗಿದೆ.

೪. ಕುಳಿತು ಉಣ್ಣುವವನಿಗೆ ಕುಡಿಕೆ ಹೊನ್ನು ಸಾಲದು / 5. ಕೆಸರಾದರೆ ಬಾಯಿ ಮೊಸರು |

ದುಡಿಮೆಯೇ ದುಡ್ಡಿನ ತಾಯಿ ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.

ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು, ದುಡಿಮೆ ಅಥವಾ ದೈಹಿಕ ಶ್ರಮ ಹಾಗೂ ಅದರ ಮಹತ್ವವೇನು ಎಂಬುದನ್ನು ತಿಳಿಸುತ್ತದೆ.

‘ಹನ್ನೆರಡನೆಯ ಶತಮಾನದಲ್ಲೇ ಶಿವಶರಣರು ‘ಕಾಯಕವೇ ಕೈಲಾಸ’, ಎಂದು ದುಡಿಮೆಯ ಮಹತ್ವವನ್ನು ಸಾರಿದರು.

ಕಾಯಕ ಎಂದರೆ ‘ಪ್ರತಿಯೊಬ್ಬ ವ್ಯಕ್ತಿಯು ಏನಾದರೊಂದು ದೈಹಿಕ ಶ್ರಮದ ಮೂಲಕ ಸಂಪಾದನೆ ಮಾಡಿ ಜೀವನ ನಡೆಸಬೇಕು’ ಸೋಮಾರಿಯಾಗಿ ಕಾಲಕಳೆಯದ ಅಪ್ಪವಟ್ಟು ದುಡಿದು ಬದುಕುವುದರಿಂದ ಹಣ ಸಂಪಾದನೆ ಸಾಧ್ಯ ಕೂತು ಉಣ್ಣುವವನಿಗೆ ಕುದುರೆ ಹೊನ್ನೂ ಸಾಲದು ಎಂಬಂತೆ ಇರುವ ಅಸ್ತಿ ಕರಗಿದ ಮೇಲೆ ಕಷ್ಟ ಪಡಬೇಕಾಗುತ್ತದೆ.

ಆದ್ದರಿಂದ ಕಷ್ಟಪಟ್ಟರ ಸುಖವಿದೆ ಎಂಬುದು ಈ ಗಾದೆಯ ಆಶಯವಾಗಿದೆ.

‘ದುಡಿಮೆಯೇ ದುಡ್ಡಿನ ತಾಯಿ’, ‘ಕಾಯಕವೇ ಕೈಲಾಸ’, ‘ಆಳಾಗಬಲ್ಲವನು ಅವನು ಅದಾಗಿ’ ಮುಂತಾದವು ಇದೇ ಅರ್ಥ ಕೊಡುವ ಗಾದೆ ಮಾತುಗಳಾಗಿವೆ.

೫೯. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿದ

ಗಾದೆಗಳು ವೇದಗಳಿಗೆ ನಮ್ಮ ಗಾದಗಳು ಹಿರಿಯರ ಅನುಭವದ ಮಾತುಗಳಾಗಿವೆ.

  • ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು, ಮಕ್ಕಳ ವ್ಯಕ್ತಿತ್ವವನ್ನು ಹೇಗೆ ನಿರ್ಮಿಸಬೇಕು ಎಂಬುದನ್ನು ತಿಳಿಸುತ್ತದೆ. * ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಮಾತಿನಂತೆ ಭವಿಷ್ಯದಲ್ಲಿ ಸದೃಢ ಸಮಾಜ ನಿರ್ಮಿಸುವ ವ್ಯಕ್ತಿಗಳನ್ನು ನಿರ್ಮಿಸುವುದು ತಂದೆ-ತಾಯಿ-ಕಿರಿಯರು ನರೆಹೊರ ಹಾಗೂ ಶಿಕ್ಷಕರ ಕರ್ತವ್ಯವಾಗಿದೆ. ಅದ್ದರಿಂದ ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಉತ್ತಮ ಆದರ್ಶ ಗುಣಗಳನ್ನು, ಸೇವಾ ಮನೋಭಾವವನ್ನು, ದೇಶಪ್ರೇಮವನ್ನು ಬೆಳೆಸಬೇಕು, ಹಾಗೆ ಎಳ ವಯಸ್ಸಿನಿಂದಲೇ ಮಕ್ಕಳ ತಪ್ಪುಗಳನ್ನು ತಿದ್ದಿ ತೀಡಿ ಒಳ್ಳೆಯ ಮಾರ್ಗದಲ್ಲಿ ನಡೆಯುವಂತೆ ಮಾಡದಿದ್ದಲ್ಲಿ ಆ ಮಕ್ಕಳು ಸಮಾಜಕ್ಕೆ ಕಂಟಕಪ್ರಾಯರಾಗುತ್ತಾರೆ. ಬೆಳೆದು ದೊಡ್ಡವರಾದ ಮೇಲೆ ಅಂಥಹವರನ್ನು ತಿದ್ದುವದು ಕಷ್ಟವಾಗುತ್ತದೆ. ಚಿಕ್ಕವರಾಗಿದ್ದಾಗಲೇ ಕೆಲವು ಮಕ್ಕಳನ್ನು ತಿದ್ದಲು ಸಾಧ್ಯವಾಗುವುದಿಲ್ಲ. ಗಿಡವಾಗಿರುವಾಗ ಬಗ್ಗಿಸಲು ಸಾಧ್ಯವಾಗದೆ ದೊಡ್ಡಮರವಾದ ಮೇಲೆ ಬಗ್ಗಿಸಿ ನೇರಮಾಡಲು ಸಾಧ್ಯವಿಲ್ಲವೋ ಹಾಗೇ ಅವರನ್ನು ತಿದ್ದವುದು ಕಷ್ಟ.

ಎಳವೆಯಲ್ಲಿಯೇ ಮಕ್ಕಳನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡಲು ಪ್ರಯತ್ನಿಸುವುದು ವುತಿಯೊಬ್ಬ ಪೋಷಕರ

ಕರ್ತವ್ಯವಾಗಿದೆ ಎಂಬುದು ಈ ಗಾದೆಯ ಆಶಯವಾಗಿದೆ.

ಬೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿದೆ.

೫೯. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿದ

ಗಾದೆಗಳು ವೇದಗಳಿಗೆ ನಮ್ಮ ಗಾದಗಳು ಹಿರಿಯರ ಅನುಭವದ ಮಾತುಗಳಾಗಿವೆ.

ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು, ಮಕ್ಕಳ ವ್ಯಕ್ತಿತ್ವವನ್ನು ಹೇಗೆ ನಿರ್ಮಿಸಬೇಕು ಎಂಬುದನ್ನು ತಿಳಿಸುತ್ತದೆ.

* ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಮಾತಿನಂತೆ ಭವಿಷ್ಯದಲ್ಲಿ ಸದೃಢ ಸಮಾಜ ನಿರ್ಮಿಸುವ ವ್ಯಕ್ತಿಗಳನ್ನು ನಿರ್ಮಿಸುವುದು ತಂದೆ-ತಾಯಿ-ಕಿರಿಯರು ನರೆಹೊರ ಹಾಗೂ ಶಿಕ್ಷಕರ ಕರ್ತವ್ಯವಾಗಿದೆ.

ಅದ್ದರಿಂದ ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಉತ್ತಮ ಆದರ್ಶ ಗುಣಗಳನ್ನು, ಸೇವಾ ಮನೋಭಾವವನ್ನು, ದೇಶಪ್ರೇಮವನ್ನು ಬೆಳೆಸಬೇಕು, ಹಾಗೆ ಎಳ ವಯಸ್ಸಿನಿಂದಲೇ ಮಕ್ಕಳ ತಪ್ಪುಗಳನ್ನು ತಿದ್ದಿ ತೀಡಿ ಒಳ್ಳೆಯ ಮಾರ್ಗದಲ್ಲಿ ನಡೆಯುವಂತೆ ಮಾಡದಿದ್ದಲ್ಲಿ ಆ ಮಕ್ಕಳು ಸಮಾಜಕ್ಕೆ ಕಂಟಕಪ್ರಾಯರಾಗುತ್ತಾರೆ.

ಬೆಳೆದು ದೊಡ್ಡವರಾದ ಮೇಲೆ ಅಂಥಹವರನ್ನು ತಿದ್ದುವದು ಕಷ್ಟವಾಗುತ್ತದೆ. ಚಿಕ್ಕವರಾಗಿದ್ದಾಗಲೇ ಕೆಲವು ಮಕ್ಕಳನ್ನು ತಿದ್ದಲು ಸಾಧ್ಯವಾಗುವುದಿಲ್ಲ.

ಗಿಡವಾಗಿರುವಾಗ ಬಗ್ಗಿಸಲು ಸಾಧ್ಯವಾಗದೆ ದೊಡ್ಡಮರವಾದ ಮೇಲೆ ಬಗ್ಗಿಸಿ ನೇರಮಾಡಲು ಸಾಧ್ಯವಿಲ್ಲವೋ ಹಾಗೇ ಅವರನ್ನು ತಿದ್ದವುದು ಕಷ್ಟ.

ಎಳವೆಯಲ್ಲಿಯೇ ಮಕ್ಕಳನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡಲು ಪ್ರಯತ್ನಿಸುವುದು ವುತಿಯೊಬ್ಬ ಪೋಷಕರ ಕರ್ತವ್ಯವಾಗಿದೆ ಎಂಬುದು ಈ ಗಾದೆಯ ಆಶಯವಾಗಿದೆ.

ಬೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿದೆ.

ಇದು ಒಂದು ಜನಪ್ರಿಯ ಗಾದ ಮಾತಾಗಿದ್ದು, ನಾವು ಮಾಡಿದ ಕೆಲಸದ ಪ್ರತಿಫಲ ಒಳಿತಾಗಲಿ ಕೆದುರಾಗಲಿ ನಾವೇ

ಅನುಭವಿಸಬೇಕು ಎಂಬುದನ್ನು ತಿಳಿಸುತ್ತದೆ.

ವ್ಯಕ್ತಿ ತಾನು ಮಾಡಿದ ಕರ್ಮಗಳ ಫಲವನ್ನು ತಾನೇ ಅನುಭವಿಸಬೇಕು. ಬೇರೆ ಯಾರೂ ಅದರ ಫಲಗಳನ್ನು ಅನುಭವಿಸಲಾರದು ಎಂಬುದನ್ನು ಹೇಳುತ್ತದೆ.

ಒಳ್ಳೆಯ ಕರ್ಮಗಳನ್ನು ಮಾಡಿದವರಿಗೆ ಒಳ್ಳೆಯ ಫಲಗಳು, ಕೆಟ್ಟ ಕರ್ಮಗಳನ್ನು ಮಾಡಿದವರಿಗೆ ಶೆಟ್ಟ ಫಲಗಳು ಉಂಟಾಗುವುದು ಖಚಿತ ಎಂಬುದನ್ನು ಇಲ್ಲಿ ಕಾಣಬಹುದಾಗಿದೆ.

ಆದ್ದರಿಂದ ನಾವು ಯಾವುದೇ ಕೆಲಸ ಮಾಡಬೇಕಾದರೂ ಅದರಿಂದಾಗುವ ಪರಿಣಾಮವೇನೆಂದು ಯೋಚನೆ ಮಾಡಬೇಕು. ಕೃತ್ಯ ಮಾಡಿದ ಮೇಲೆ ಪಶ್ಚಾತ್ತಾಪ ಪಟ್ಟರೆ ಏನೂ ಪ್ರಯೋಜನವಿಲ್ಲ.

ತಾನು ಮಾಡಿದ ಕರ್ಮಗಳ ಫಲವನ್ನು ತಾನು ಅನುಭವಿಸಿಯೇ ತೀರಬೇಕು, ಬೆಳೆಯ ಕಾಳನ್ನು ಬಿತ್ತಿದರೆ ಬೆಳೆ ಬೆಳೆಯುವುದಲ್ಲದೆ ಕಳೆ ಬೀಜ ಬಿತ್ತಿದರೆ ಬೆಳೆ ಬೆಳೆಯುವುದೇ?

ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿ ತನ್ನ ಸ್ವಾರ್ಥವನ್ನು ಮರೆತು ಸಮಾಜಮುಖಿಯಾಗಿ, ಎಲ್ಲರಿಗೂ ಉಪಯೋಗವಾಗುವಂತಹ ಕೆಲಸಗಳನ್ನು ಮಾಡಬೇಕು. ಅದನ್ನು ಬಿಟ್ಟು ತನ್ನ ಸ್ವಾರ್ಥಕ್ಕಾಗಿ ಕೆಟ್ಟ ಮಾರ್ಗವನ್ನು ಅನುಸರಿಸಿದರೆ ಅದರ ಪರಿಣಾಮವೂ ಕಟ್ಟದ್ದೇ ಆಗುತ್ತದೆ.

ಇದರಿಂದ ಯಾರೂ ತಪ್ಪಿಸಿಕೊಳ್ಳಲಾರರು ಎಂಬುದನ್ನು ಈ ಗಾದೆ ಒತ್ತಿ ಹೇಳುತ್ತದೆ.

ಉಪ್ಪಿಗಿಂತ ರುಚಿಯಿಲ್ಲ: ತಾಯಿಗಿಂತ ಬಂಧುವಿಲ್ಲ.

  • ಗಾದೆಗಳು ವೇದಗಳಿಗೆ ನಮ್ಮ ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.
  • ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು, ತಾಯಿಯ ಮಹತ್ವವನ್ನು ತಿಳಿಸುತ್ತದೆ.

ಉಪ್ಪಿಲ್ಲದಿದ್ದರೆ ಯಾವುದೇ ಊಟವು ರುಚಿಸದು, ಉಪ್ಪು ಎಲ್ಲಾ ಪಾಕ ವೈವಿಧ್ಯಗಳಿಗೂ ಪ್ರಧಾನ, ಅದೇ ರೀತಿ ತಾಯಿಯು

ಕೂಡ. ಉಪ್ಪಿಲ್ಲದಿದ್ದರೆ ಊಟ ಹೇಗೆ ರುಚಿಸುವುದಿಲ್ಲವೋ, ಅದೇ ರೀತಿ ತಾಯಿ ಬಿಟ್ಟರೆ ಅವಳು ನೀಡುವಪ್ರೀತಿ ವಾತ್ಸಲ್ಯವನ್ನು ಯಾರೂ ನೀಡಲಾರರು.

ತಾಯಿ ನಮ್ಮನ್ನು ತಿದ್ದಿ ತೀಡಿ, ನಮ್ಮ ದುಃಖವನ್ನು ತನ್ನ ದುಃಖವೆಂದು ಭಾವಿಸಿ, ನಮ್ಮ ಸುಖದಲ್ಲಿ ತನ್ನ ಸುಖವನನ್ನು ಕಾಣುವಳು, ಹಾಗೆಯೇ ಮನೆಯಲ್ಲಿ ತಂದ್ರೆ, ಅಣ್ಣ, ಅಕ್ಕ, ತಂಗಿ, ಮಾವ ಅತ್ತೆ ಮುಂತಾಗಿ ನಾನಾ ರೀತಿಯ ಬಂಧುಗಳಿದ್ದರೂ ತಾಯಿಯನ್ನು ಮಿಗಿಲಾದ ಬಂಧುಗಳಿಲ್ಲ, ಆದ್ದರಿಂದಲೇ ಜನಪದರು ಯಾರೇ ಆದರು ಹೆತ್ತ ತಾಯಂತೆ ಅದಾರೂ ಸಾವಿರ ಸೌದೆ ಒಲೆಯಲ್ಲಿ ಉರಿದಾದ ದೀವಿಗೆಯಂತ ಬೆಳಕುಂಟೆ ಎಂದು ತಾಯಿ ಮಹಿಮೆಯನ್ನು ಹಾಡಿ ಹೊಗಳಿದ್ದಾರೆ.

‘ಮನೆಯೇ ಮೊದಲ ಪಾಠಶಾಲೆ; ತಾಯಿಯೇ ಮೊದಲ ಗುರು ಎಂಬ ಮಾತು ಅದರ: ಸತ್ಯ ಹಾಗೆಯೇ ಹೆತ್ತ ತಾಯಿ ಕಣ್ಣಿಗೆ ಕಾಣುವ ದೇವರು, ಅಮೂಲ್ಯ ಆಸ್ತಿ.

ಆ ಆಸ್ತಿಯನ್ನು ಜೋಪಾನವಾಗಿ ಕಾಪಾಡಬೇಕಾದದ್ದು ನಮ್ಮಲ್ಲರ ಕರ್ತವ್ಯವಾಗಿದೆ ಎಂಥಹ ಕತ್ತ ಬಂದರೂ ಇತರ ಬಂದುಗಳು ನಮ್ಮಿಂದ ದೂರವಾದರೂ ನಮ್ಮನ್ನು ಅವಳು ಕೈಬಿಡಳು ಅದ್ದರಿಂದ “ತಾಯಿಗಿಂತ ಬಂಧುವಿಲ್ಲ” ಎಂಬ ಅಕ್ಷರಶಃ ಅರ್ಥವತ್ತಾಗಿದೆ.

Author
Language Kannada
No. of Pages9
PDF Size2 MB
CategoryLiterature
Source/CreditsSejad.com

Alternate PDF Download Link

Related PDFs

Verb Forms With Hindi Meaning PDF

ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ – Gadegalu With Explanation In Kannada PDF Free Download

Leave a Comment

Your email address will not be published. Required fields are marked *

error: Content is protected !!