‘ಶಬರಿ ಪಾಠದ ಪ್ರಶ್ನೋತ್ತರಗಳು ನೋಟ್ಸ್’ PDF Quick download link is given at the bottom of this article. You can see the PDF demo, size of the PDF, page numbers, and direct download Free PDF of ‘Shabari Lesson Notes In Kannada’ using the download button.
10ನೇ ತರಗತಿ ಕನ್ನಡ ಶಬರಿ ಪಾಠದ ನೋಟ್ಸ್ – 10th Standard Shabari Lesson Notes In Kannada PDF Free Download
10ನೇ ತರಗತಿ ಕನ್ನಡ
ಔದ್ಯೋಗೀಕರಣ, ದುರ್ಯೋಧನ, ವಿದ್ಯುಚ್ಛಕ್ತಿ, లక్ష ತೋರಣ.ಶಿವಾಂತರ,ದಿಮೆ, ಆವರಣ ರಂಜಿಸು
ಯಾಂತ್ರೀಕರಣ, ವಿದ್ಯುದೀಕರಣ, ಔದ್ಯೋಗೀಕರಣ, ಅಣುಶಕ್ತಿ ಇವುಗಳ ವಿಷಯವನ್ನು ಪೂರ್ಣವಾಗಿ ತಿಳಿದು ಸ್ವಾಧೀನದಲ್ಲಿಟ್ಟುಕೊಂಡರೆ ಮಾತ್ರ ಇವುಗಳಿಂದ ಉಪಯೋಗ.
ಇಲ್ಲವಾದರೆ ಇವು ನಮ್ಮನ್ನು ನಾಶ ಮಾಡುವುವು. ಪಾಶ್ಚಾತ್ಯರಲ್ಲಿ ಈ ನವನ್ನು ತಕ್ಕಮಟ್ಟಿಗೆ ಕ್ಕಳಾದಿಯಾಗಿ ಎಲ್ಲರೂ ತಿಳಿದಿರುತ್ತಾರೆ.
ಇವುಗಳ ಉಪಯೋಗವನ್ನು ನಾವು ಮಾಡಿಕೊಳ್ಳುವುದಾದರೆ ನಮಗೂ ಲ್ಪಸ್ವಲ್ಪ ತಿಳಿದಿರಬೇಕು, ಒಂದು ದಿನ ನನ್ನ ಮಗಳು ಮತ್ತು ಅಳಿಯ ಇಬ್ಬರೂ ಕೆಲಸಕ್ಕೆ ಹೋಗಿದ್ದರು.
ಹೋಗುವ ಮೊದಲು ವಿದ್ಯುತ್ ಒಲೆಯನ್ನು ಹೊತ್ತಿಸಿ ತಿಸಿ ಅಡುಗೆ ಮಾಡಿ “ಆಫ್’ ಮಾಡಿ ಹೋದರು.
ಮನೆಯವರು ಎಲ್ಲಿಗಾದರೂ ಹೊರಟರೆ, ನಾನು ಎಲ್ಲ ಸ್ವಿಚ್‌ಗಳನ್ನೂ ‘ಆಫ್’ ಮಾಡಿ ಹೋಗಿ ಎಂದೇ ಹೇಳುತ್ತಿದ್ದೆ.
ನನ್ನ ಅಳಿಯ, ಮಗಳು, ಮತ್ತು ಮನೆಬಿಟ್ಟು ಹೋದ ಮೇಲೆ, ನಾನು ನನ್ನ ಹೆಂಡತಿ ಇಬ್ಬರೇ ಮಾತನಾಡುತ್ತ ಕುಳಿತಿದ್ದೆವು.
ಇದ್ದಕ್ಕಿದ್ದಂತೆ ಮನೆಯ ಯಾವುದೋ ಮೂಲೆಯಲ್ಲಿ ‘ಕೊಯ್’ ಶಬ್ದ ಪ್ರಾರಂಭವಾಯಿತು. ಅದು ಒಂದು ದೊಡ್ಡ ಧ್ವನಿಯ ಶ್ರುತಿಯಂತೆ ಒಂದೇ ಸಮನೆ ಕೂಗತೊಡಗಿತು.
ನಾವು ಗಾಬರಿಯಾಗಿ ತಕ್ಷಣ ನೆಯನ್ನೆಲ್ಲ ನೋಡಿದೆವು. ಅಮೆರಿಕ, ಕೆನಡಗಳಲ್ಲಿ ಮನೆಗಳನ್ನು ಸಾಧಾರಣವಾಗಿ ಮರದಿಂದಲೇ ಕಟ್ಟಿರುತ್ತಾರೆ.
ಸುತ್ತಿ ದುರ್ಯೋಧನನು ಅರಗಿನ ಮನೆ ಕಟ್ಟಿದಂತೆ, ಆದ್ದರಿಂದ ಅಮೆರಿಕ, ಕೆನಡಗಳಲ್ಲಿ ಬೆಂಕಿಯ ಭಯ ಅಪಾಯ ಹೆಚ್ಚು.
ಆ ಕೊಂಬಿನ ಸದ್ದು ಒಂದೇ ಸಮನಾಗಿ ನಡೆದೇ ಇತ್ತು. ಅಲ್ಲದೆ ಅಡುಗೆ ಮನೆಯ ವಿದ್ಯುತ್ ಒಲೆಯ ಕಡೆಯಿಂದಲೇ ಬರುತ್ತಿತ್ತು.
ಎಲ್ಲ ಸ್ವಿಚ್‌ಗಳೂ ‘ಆಫ್’ ಆಗಿವೆಯೆಂದೇ ಹೆಂಡತಿ ಹೇಳಿದಳು, ವಿದ್ಯುತ್ ಒಲೆ ಬಗ್ಗೆ ಅವಳಿಗೆ ಸ್ವಲ್ಪ ಅನುಭವವಿತ್ತು.
ನಮ್ಮಲ್ಲಿ ಒಂದೋ ಎರಡೋ ಒಲೆ ಹಾಕಿಕೊಂಡು ಸ್ವಿಚ್ ಇಟ್ಟುಕೊಂಡಿರುತ್ತೇವೆ. ಆದರೆ ಅಲ್ಲಿ ಆ ಒಲೆಗಳು ಸ್ವಿಚ್ ಜೋಡಣೆ ಹೊಸ ತರಹ, ಅವುಗಳ ಮೇಲಿನ ಅಸಂಖ್ಯಾತ ಅಂಕಿ, ಗೆರೆ ಮತ್ತು ಬಣ್ಣಗಳು ಯಾವುದನ್ನು ಮುಟ್ಟಿದರೆ ಏನೋ ಎಂಬ ಭಯ, ಹೆಂಡತಿ “ಮಗ್ಗಲು ಮನೆಗಾದರೂ ಹೋಗಿ ಯಾರನ್ನಾದರೂ ಕರೆದುಕೊಂಡು ಬಂದು ತೋರಿಸಿ, ಮನೆಯಲ್ಲಿ ಬೆಂಕಿ ಹೊತ್ತಿಕೊಂಡೀತು” ಎಂದಳು.
ನಾನು ಬಲಗಡೆಯ ಮೊದಲನೆಯ ಮನೆಗೆ ಹೋಗಿ ನೋಡಿದೆ. ಬೀಗ ಹಾಕಿತ್ತು. ಎಡಗಡೆಯ ಎರಡು ಮನೆಗಳಿಗೆ ಹೋದೆ, ಯಾರೂ ಇರಲಿಲ್ಲ.
ಬೀದಿಯಲ್ಲಿ ಯಾರಾದರೂ ಇದ್ದಾರೆಯೇ ಎಂದು ನೋಡಿದೆ, ಅಮೆರಿಕದ ಬೀದಿಯಲ್ಲಿ ನಡೆದುಕೊಂಡು ಹೋಗುವವರೇ ವಿರಳ, ಕಾರಿನಲ್ಲಿ ೬೨೫ ರಿಂದ ೭0 ಮೈಲಿ ವೇಗದಲ್ಲಿ ಗರಹೊಡೆದವರಂತೆ ನುಗ್ಗುತ್ತಿರುತ್ತಾರೆ.
ಇಷ್ಟೆಲ್ಲ ಗದ್ದಲ ಮಾಡುತ್ತಿದ್ದರೂ ವಿದ್ಯುತ್, ಕೊಂಬು ಲಕ್ಷ್ಯವಿಲ್ಲದೆ ಒಂದೇ ಸಮನಾಗಿ ಕೂಗುತ್ತಲೇ ಇತ್ತು.
ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ಪ್ರೈಮರಿ ಶಾಲೆ ಇದ್ದಿತು. ಅವಾಗ ಪಾರಶಾಲೆಯ ಹುಡುಗರನ್ನು ವಿರಾಮಕ್ಕಾಗಿ ಬಿಟ್ಟುದನ್ನು ನೋಡಿ, ನನ್ನ ಪಂಡತಿ ಆ ಸ್ಕೂಲಿಗೆ ಹೋಗಿ ಯಾರಾದರೂ ಹುಡುಗರನ್ನೋ, ಮೇಷ್ಟ್ರನ್ನೋ ಕಳೆದುಕೊಂಡು ಬನ್ನಿ, ಮನೆಸುಟ್ಟು ಹೋಗುವುದರೊಳಗಾಗಿ ಬನ್ನಿ ಎಂದು ಹೇಳಿದರು.
ಅವಳಿಗೂ ನನ್ನ ಮೇಲೆ ಕೋಪ, ಹೆಂಗಸರೂ ಮಕ್ಕಳೂ ವಿದ್ಯುಚ್ಛಕ್ತಿ, ಯಂದ್ರವಿಣಿ ಇವನ್ನೆಲ್ಲ ನಡೆಸುವುದನ್ನು ಕಲಿತಿರುವಾಗ, ನಾನು ಯಾಕೆ ಅದನ್ನು ಸ್ವಲ್ಪವೂ ಕಲಿಯಲಿಲ್ಲ’ ಎಂದು ಅವಳು ನನ್ನನ್ನೇ ಕೋಪದಿಂದ ನೋಡುತ್ತ “ನನಗೆ ಇಂಗ್ಲಿಷ್ ಬಂದಿದ್ದರೆ, ನಾನು ಇಷ್ಟು ಹೊತ್ತಿಗೆ ಬೆಂಕಿ ಆರಿಸುವವರನ್ನೇ ಕರೆಸಿಬಿಡುತ್ತಿವೆ.”
ಎನ್ನುತ್ತಿರುವಂತೆ ನಾನು ಸ್ಕೂಲಿನತ್ತ ಹೆಜ್ಜೆ ಹಾಕಿದ ಹಾಗೆ ಹೋಗುವಾಗ ಯಾವನಾದರೂ ದೊಡ್ಡ ಹುಡುಗ ಸಿಕ್ಕರೆ ಅವನನ್ನೇ ಮನೆಗೆ ಕರೆದುಕೊಂಡು ಹೋಗೋಣ ಎಂದು ಶಾಲಾ ಆವರಣವನ್ನು ಪ್ರವೇಶಿಸಿ, ಎಲ್ಲರನ್ನೂ ನೋಡುತ್ತಿದ್ದೆ.
ನನ್ನನ್ನು ನೋಡಿದ ಕೂಡಲೇ ಅವರೆಲ್ಲ ಅಲ್ಲಿಂದ ಎದ್ದು ನಿಧಾನವಾಗಿ ನನ್ನನ್ನೇ ದುರುದುರನೆ ನೋಡುತ್ತ ಸ್ಕೂಲಿನ ಕಡೆಗೆ ಹೊರಟೇ ಹೋದರು.
ನನ್ನ ದೃಷ್ಟಿ ದೂರದಲ್ಲಿ ಕುಳಿತಿದ್ದ ಒಬ್ಬ ದೊಡ್ಡ ಬಾಲಕನ ಕಡೆ ಇದ್ದುದರಿಂದ, ನಾನು ಅವನ ಕಡೆಗ ಹೋಗುತ್ತಿರಲು, ಅವನೂ ನನ್ನನ್ನು ನೋಡಿ ಓಡಿಯೇ ಬಿಟ್ಟ. ನನಗೆ ಒಂದೂ ಅರ್ಥವಾಗಲಿಲ್ಲ.
ಸ್ಕೂಲಿನ ಒಳ ಅಂಗಳದಲ್ಲಿ ಅವರಲ್ಲಿ ಗುಡುಗುಜು ಎನ್ನುತ್ತಾ ಸೇರಿದ್ದರು. ನಾನು ಅವರನ್ನು ಇನ್ನೂ ಸಮೀಪಿಸಲು
ಯತ್ನಿಸಿದಾಗ, ಅವರೆಲ್ಲ ಒಟ್ಟಾಗಿ ಸ್ಕೂಲಿನ ಒಳಗಡೆ ಇದ್ದ ಒಂದು ಪ್ರತ್ಯೇಕ ಬ್ಯಾಡ್‌ಮಿಂಟನ್‌ಟೆನ್ನಿಸ್ ಕೋರ್ಟ್ ಹಾಲ್ ಗೆ ನುಗ್ಗಿದರು.
ಹಾಲ್‌ನ ಇನ್ನೊಂದು ಕೊನೆಯ ಉಪಾಧ್ಯಾಯರ ವಿಶ್ರಾಂತಿ ಕೊಠಡಿ, ವಿಶ್ರಾಂತಿ ಕಾಲವಾದುದರಿಂದ ಉಪಾಧ್ಯಾಯರೆಲ್ಲ ಅಲ್ಲಿ ಸೇರಿದ್ದರು.
ವಿದ್ಯಾರ್ಥಿಗಳೆಲ್ಲಿ ಉಪಾಧ್ಯಾಯರ ರಕ್ಷಣೆ ಕೋರಿ ಓಡಿದ್ದಳೆಂಬುದು, ನಾನು ಟೆನ್ನಿಸ್ ಕೋರ್ಟ್ ಹಾಲನ್ನು ಪ್ರವೇಶಿಸಿದಾಗ ತಿಳಿಯಿತು.
ಹಾಲಿನ ಮತ್ತೊಂದು ಕಡೆ ಹುಡುಗರನ್ನೂ ಮೀರಿ ನಿಂತಿದ್ದ ನನ್ನನ್ನು ಕಂಡು ಉಪಾಧ್ಯಾಯರೆಲ್ಲ ಕುತೂಹಲದಿಂದ ನನ್ನನ್ನೇ ದೃಷ್ಟಿಸಿದರು.
ನಾನೇ ಅವರ ಹತ್ತಿರಕ್ಕೆ ಹೊರಟ. ಆಗ ಹುಡುಗರೆಲ್ಲ ತಮ್ಮ ನಡುವೆ ಯಾವುದಾದರೊಂದು ವಿಚಿತ್ರ ಪ್ರಾಣಿ ಹೋಗುತ್ತಿದ್ದರೆ ಹೇಗೋ ಹಾಗೆ ನನಗೆ ದಾರಿಬಿಟ್ಟು ಹಿಂದಕ್ಕೆ ನಿಂತುಕೊಂಡರು, ಉಪಾಧ್ಯಾಯರ ಕಣ್ಣುಗಳೂ ಸಹ ನನ್ನಲ್ಲಿಯೇ ಪೂರ್ಣವಾಗಿ ನೆಟ್ಟಿದ್ದವು.
ಅಷ್ಟು ಜನರ ಕಣ್ಣಿನ ತೋರಣದ ನಡುವೆ ನಡೆಯುತ್ತಿದ್ದ ನನಗೆ, ನಾನೊಬ್ಬ ಅಪರಾಧಿಯೋ, ಸಮುಖವೋ, ವಿಚಿತ್ರಪಾಣಿಯೋ ಎಂಬಂತೆ ಭಾಸವಾಯಿತು. ಇದ್ದಕ್ಕಿದ್ದಂತೆ ನನ್ನ ವೇಷ ವಿಚಿತ್ರವಾಗಿದೆ ಎಂಬ ಆ೦ಶ ನನಗೆ ಹೊಳೆಯಿತು.
ಆ ದಿನ ನಾನು ಅಗಲವಾದ ಎಂಟೂವರೆ ಮೊಳ ಉದ್ದದ ಖಾದಿ ಕಚ್ಚೆಪಂಚೆಯನ್ನು ಉಟ್ಟಿದ್ದೆ, ಅದು. ಖಾದಿಯಲ್ಲಿ ಸಹ ದಪ್ಪನೂಲಿನ ಬಟ್ಟೆಯೆ, ಅದಕ್ಕೆ ಅಗಲವಾದ ಕೆಂಪು ಕಂಬಿ, ಕಂಬಿಯ ತುದಿಯಲ್ಲಿ ನಾಲ್ಕು ಜರಿಗೆರೆಗಳು, ಭಾರತದಲ್ಲಿರುವಾಗ ಅತಿ ಜರ್ಬಾಗಿ ಕಾಣುತ್ತೆ ಎಂದು ಅದನ್ನು ಹೆಚ್ಚಾಗಿ ಉಡುತ್ತಲೇ ಇರಲಿಲ್ಲ. ಹೊರದೇಶಕ್ಕೆ ಹೊರಟಾಗ ಧಡೂತಿಯಾಗಿದೆ, ಬೆಚ್ಚಗಿರುತ್ತೆ ಎಂದು ತೆಗೆದುಕೊಂಡಿದ್ದೆ.
ಚಳಿಗಾಗಿ ಒಂದು ಕೆಂಪು ಉಣ್ಣೆಯ ಶಾಲು, ಮಫ್ಲರ್ ಕಟ್ಟಿದ್ದೆ, ಸ್ಕೂಲಿಗೆ ಹೋಗುವ ದಾರಿಯಲ್ಲಿ ಅದು ಸಡಿಲವಾದುದರಿಂದ ಹೆಗಲಮೇಲೆ ಹಾಕಿಕೊಂಡಿದ್ದೆ.
ಕಾವಿಬಣ್ಣದ ನೀಳವಾದ ಜುಬ್ಬ, ಹಣೆಯಲ್ಲಿ ಢಾಳಾದ ಕೆಂಪು ನಾಮ, ತಲೆ ಮೇಲೆ ಕೆದರಿನಿಂತಿದ್ದ ಬಿಳಿಕೂದಲು, ಬಿಳಿ ಗಡ್ಡ, ಮೀಸೆ, ಕಾಲಿಗೆ ದಪ್ಪನಾದ ಎಕ್ಕಡ – ನನ್ನ ಮೈ ಉಡುಪುಗಳಲ್ಲಿ ಏಳೆಂಟು ಬಣ್ಣಗಳು, ಹೊಳಪು ಎಲ್ಲ ನೋಡಿ ಉಪಾಧ್ಯಾಯರು ನಕ್ಕರು, ತಕ್ಷಣ ಹುಡುಗರೆಲ್ಲ ಒಂದೇ ಉಸಿರಿಗೆ `ದೀರ್ಘವಾಗಿ ನಕ್ಕರು, ಪೈಡ್ ಪೈಪರ್, ಸಾಂತಾಕ್ಲಾಸ್ ಎಂದೆಲ್ಲ ಕೂಗಿದರು.
ಉಪಾಧ್ಯಾಯರೊಬ್ಬರು ನಿಮ್ಮ ಉಡುಪ ಸ್ವಲ್ಪ ವಿಚಿತ್ರವಾಗಿದೆ. ದಯವಿಟ್ಟು ಕುಳಿತುಕೊಳ್ಳಿ ನಿಮಗೆ ಏನಾಗಬೇಕು ? ಎಂದು ಕುರ್ಚಿ ತೋರಿಸಿದರು.
ಅಷ್ಟರಲ್ಲಿಯೇ ಮತ್ತೊಬ್ಬ ಉಪಾಧ್ಯಾಯಿನಿ ನಿಮಗೆ ಚಳಿಯಾಗುವುದಿಲ್ಲವೇ? ನೀವು ಎಲ್ಲಿಂದ ದಿರುವಿರಿ?” ಎಂದು ಕೇಳಿದರು. ಈ ಅವಾಂತರದಲ್ಲಿ ನಾನು ಸ್ಕೂಲಿಗೆ ಬಂದ ದೇಶವನ್ನೇ ಮರೆತುಬಿಟ್ಟೆ.
ನಾನು ನೀವು ಗಾಂಧೀ ಹೆಸರು ಕೇಳಿರುವರಾ?” ಎಂದೆ, ನಾಲ್ಕಾರು ವಿದ್ಯಾರ್ಥಿಗಳು ಮತ್ತು ಪಾಧ್ಯಾಯರೂ “ಕೇಳಿದ್ದೇವೆ” ಎಂದರು.
ಒಬ್ಬ ವಿದ್ಯಾರ್ಥಿ ನಮ್ಮ ಪುಸ್ತಕದಲ್ಲಿ 1 ಮೇಲೆ ಒಂದು ಪಾಠವಿದೆಯಲ್ಲ” ಎಂದನು. “ನಾನು ಗಾಂಧೀ ಭಾರತದಲ್ಲಿ ಜನಿಸಿದವನು, ಭಾರತದ ಹವೆ ಬಹಳ ಹಿತವಾಗಿರುತ್ತದೆ. ಅಲ್ಲಿ ಅತ್ಯಂತ ಕಡಿಮೆ ಟ್ಟೆಗಳಿಂದಲೇ ಜೀವಿಸಬಹುದು. ಈ ಬಟ್ಟೆಯನ್ನು ಭಾರತದಲ್ಲಿ ಪ್ರಚಾರಕ್ಕೆ ತಂದವರು ಗಾಂಧೀಜಿ. ಇದು ಪೂರ್ಣವಾಗಿ ಕೈಯಿಂದಲೇ ತಯಾರಾದ ಬಟ್ಟೆ, ಇದಕ್ಕೆ ಯಾವ ರೀತಿಯಿಂದಲೂ ಯಂತ್ರದ ಸೋಂಕು ಉಂಟಾಗಿಲ್ಲ’ ಎಂದೆ.
ನಾನು ಕೈಯಿಂದ ಮಾಡಿದ್ದು ಎಂದ ಕೂಡಲೇ ಎಲ್ಲ ಉಪಾಧ್ಯಾಯರೂ ಹುಡುಗರೂ ಬಂದು ನನ್ನ ಬಟ್ಟೆಗಳನ್ನು ಮುಟ್ಟಿ ನೋಡಿದರು. ಒಬ್ಬ ಉಪಾಧ್ಯಾಯರು “ಕೈಯಿಂದ ಇದನ್ನು ಮಾಡುವುದು ಹೇಗೋ” ಎಂದು ನನ್ನ ಮಾತಿನಲ್ಲಿ ಅಪನಂಬಿಕೆಯನ್ನೇ ವ್ಯಕ್ತಪಡಿಸಿದರು.
ನಾನು ರಾಟೆ(ಚರಕ)ಯಿಂದ ನೂಲುವುದು, ಮಗ್ಗದಿಂದ ನೇಯುವುದು ಈ ವಿಷಯಗಳನ್ನೆಲ್ಲ ವಿವರಿಸುತ್ತಾ ಹಾಗೇ ಬಾಗಿಲ ಕಡೆ ದೃಷ್ಟಿ ಹಾಯಿಸಿದಾಗ ನನ್ನ ಹೆಂಡತಿ ಬಾಗಿಲಿನಿಂದ ಒಳಕ್ಕೆ ಬರುತ್ತಿದ್ದಳು, ಅವಳನ್ನು ನೋಡಿ ಕೂಡ ಉಪಾಧ್ಯಾಯರಿಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೂ ನನ್ನನ್ನು ನೋಡಿದಷ್ಟೇ ದಿಗ್ಧಮೆಯಾಯಿತು.
ನನ್ನ ಹೆಂಡತಿ ನೆಟ್ಟಗೆ ಬಂದು ನನ್ನ ಮುಂದೆ ನಿಂತುಕೊಂಡು “ಚೆನ್ನಾಯ್ತು, ಬಂದ ಕೆಲಸವೇ ಬಿಟ್ಟು ಮಾತಾಡ್ತಾ ಕೂತುಬಿಟ್ಟಿರಿ.
ಈಗಲೋ ಆಗಲೋ ಮನೆ ಉರಿದು ಹೋಗುತ್ತೆ” ಎಂದಳು. ನನಗೆ ಆಗ ನಾನು ಬಂದಿದ್ದ ಕಾರ್ಯದ ಜ್ಞಾನೋದಯವಾಯಿತು.
ನಾನು ಉಪಾಧ್ಯಾಯರಿಗೆ “ಈಕೆ ನನ್ನ ಹೆಂಡತಿ. ನಮ್ಮ ಮನೆ ನೋಡಿ ಆ ಎದುರು ಸಾಲಿನಲ್ಲಿದೆ. ಅಲ್ಲಿ ವಿದ್ಯುತ್ ಒಲೆ ಏನೋ ತೊಂದರೆ ಕೊಡುತ್ತಿದೆ.
ನನಗೆ ಅಭ್ಯಾಸವಿಲ್ಲ. ನಿಮ್ಮ ವಿದ್ಯಾರ್ಥಿಗಳ ಪೈಕಿ ಈ ವಿಷಯ ಗೊತ್ತಿರುವವರು ಯಾರಾದರೂ ಬಂದು ಒಂದು – ಗಳಿಗೆ ನೋಡಿ ಸರಿಪಡಿಸುವರೇ?
ಎಂದು ಕೇಳಿದೆ. ಉಪಾಧ್ಯಾಯರು ಹುಡುಗರ ಪೈಕಿ ಬಲಿಷ್ಠರಾದವನನ್ನು ಕರೆದು “ಸ್ವಲ್ಪ ಹೋಗಿ ಇವರಿಗೆ ಸಹಾಯ ಮಾಡಿ ಬಾ ಎಂದರು. ಆ ಹುಡುಗ ನನ್ನ ಜೊತೆ ಹೊರಟು ಮನೆಗೆ ಬಂದ, ನೆಟ್ಟನೆ ಅಡುಗೆ ಮನೆಗೆ ಬಂದು ಸುತ್ತ ನೋಡಿದ.
ವಿದ್ಯುತ್ ಒಲೆಗೆ ಸಂಬಂಧಿಸಿದ ಒಂದು ಮುಳ್ಳಿಗೆ ಆ ಧ್ವನಿ ಸಂಬಂಧಿಸಿದ್ದೆಂದು ಅವನಿಗೆ ತಿಳಿಯಿತು. ಆದರೆ ಸಿಚ್ಚನ್ನು ಪತ್ತೆ ಮಾಡಿ ಅವನು ಅದನ್ನು ಆಮುಕಿದ, ಕೂಡಲೇ ಧ್ವನಿ ನಿಂತಿತು.
ಆ ಇಚನ್ನು ನನ್ನ ಮಗಳು ಆಫ್ ಮಾಡದೇ ಹೋಗಿದ್ದುದರಿಂದ ಅದು ಹಂಬವಾದ ಪೂರೈಸುತ್ತಿದ್ದಳೆಂಬುದು ನಮಗೆ ಆನಂತರ ಗೊತ್ತಾಯಿತು.
ಇದಾದ ಅನಂತರ ನಾನು ಇನ್ನೂ ಮೂರು ನಾಲ್ಕುದಿನ ಆದೇ ಸ್ಕೂಲಿಗೆ ಹೋಗಿ, ವಿದ್ಯಾರ್ಥಿಗಳಿಗೆ ಪ್ರಶೋತ್ತರದ ಸಂಭಾಷಣೆ ನಡೆಸಿದೆ, ಅಮೆರಿಕದವರ ಜೀವನ ಕ್ರಮವನ್ನು ಹತ್ತಿರದಿಂದ ನೋಡುವುದೂ ನನ್ನ ಗುರಿಯಾಗಿದ್ದುದರಿಂದ ನಾನು ಹೇಳುತ್ತಿದ್ದ ಕನ್ನಡನಾಡಿನ ಅನೇಕ ಜಾನಪದ ಹಾಸ್ಯ ಕಥೆಗಳು, ಗಾದೆಗಳು ಮತ್ತು ಪಂಚತಂತ್ರದ ಕಥೆಗಳಲ್ಲಿ ವಿದ್ಯಾರ್ಥಿಗಳನ್ನೂ ಉಪಾಧ್ಯಾಯರನ್ನೂ ಸಮಾನವಾಗಿಯೇ ರಂಜಿಸಿದವು, ಆ ದೇಶ ಬಿಟ್ಟು ಹೊರಟಾಗ ಅವರಿಂದ ಅತ್ಯಂತ ಆತ್ಮೀಯವಾದ.
Author | – |
Language | Kannada |
No. of Pages | 160 |
PDF Size | 20 MB |
Category | Education |
Source/Credits | kanaja.karnataka |
10ನೇ ತರಗತಿ ಕನ್ನಡ ಶಬರಿ ಪಾಠದ ನೋಟ್ಸ್ – 10th Standard Shabari Lesson Notes In Kannada PDF Free Download